ರಾಜ್ಯದಲ್ಲಿ ಯುವ ನೀತಿ ಅನುಷ್ಠಾನವಾಗಲಿ:ಡಾ ಜಾನಪದ ಎಸ್ ಬಾಲಾಜಿ

Spread the love

ರಾಯಚೂರು: ರಾಜ್ಯದಲ್ಲಿ ಯುವ ನೀತಿ ಅನುಷ್ಠಾನವಾಗಬೇಕು ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಸರ್ಕಾರವನ್ನು ಅಗ್ರಹಿಸಿದರು.

ರಾಯಚೂರು ಗ್ರಾಮಾಂತರ ದೇವಸೂಗುರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ರಾಯಚೂರು ಜಿಲ್ಲಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ರಾಜ್ಯದಲ್ಲಿ ಜಾರಿಯಾಗಿರುವ ಯುವ ನೀತಿಯನ್ನು ಶೀಘ್ರದಲ್ಲಿ ಅನುಷ್ಠಾನ ಮಾಡಗಬೇಕು, ರಾಜ್ಯದಲ್ಲಿ ಯುವಜನ ಮೇಳ ಹಾಗೂ ರಾಜ್ಯ ಯುವ ಪ್ರಶಸ್ತಿಯನ್ನು ಮತ್ತೆ ಪುನರಾರಂಭಿಸಬೇಕು, ಯುವ ಸಂಘಗಳು ಗರಡಿ ಮನೆಗಳಿಗೆ ನೀಡುತ್ತಿದ್ದ ಅನುದಾನವನ್ನು ಮತ್ತೆ ನೀಡುವಂತಾಗಬೇಕು, ಗ್ರಾಮಕ್ಕೊಂದು ಯುವಜನ ಸಂಘ ಯೋಜನೆಯನ್ನು ಮತ್ತೆ ಸ್ಥಾಪಿಸಬೇಕು, ಕ್ರೀಡೆಗೆ ನೀಡುತ್ತಿರುವ ಪ್ರಾತಿನಿಧ್ಯವನ್ನು ಯುವ ಸಬಲೀಕರಣಕ್ಕೆ ನೀಡಬೇಕೆಂದು ಆಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ನೆಹರು ಯುವ ಕೇಂದ್ರ ನಿವೃತ್ತ ಲೆಕ್ಕಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಯಚೂರು ಜಿಲ್ಲಾ ಗೌರವಾಧ್ಯಕ್ಷ ಜಿಎಸ್ ಹಿರೇಮಠ ಮಾತನಾಡಿ, ಯುವ ಒಕ್ಕೂಟ ವತಿಯಿಂದ ಮುಂದಿನ ದಿನಗಳಲ್ಲಿ ಅಳಿವಿನಂಚಿನಲ್ಲಿರುವ ಯುವ ಸಂಘಗಳನ್ನು ಪುನಶ್ಚೇತನ ಮಾಡಲಾಗುವುದು, ಯುವಕರಿಗೆ ರಾಷ್ಟ್ರೀಯತೆಯ ಬಗ್ಗೆ ಅರಿವು ಮೂಡಿಸುವ ಶಿಬಿರಗಳನ್ನು, ರಾಷ್ಟ್ರಧ್ವಜ ಕಟ್ಟುವ ತರಬೇತಿಯನ್ನು ಸಹ ಒಕ್ಕೂಟದ ವತಿಯಿಂದ ನೀಡಲಾಗುವುದು ತಿಳಿಸಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತರು ಕರ್ನಾಟಕ ರಾಜ್ಯ ಸಂಘ ಒಕ್ಕೂಟದ ರಾಯಚೂರು ಜಿಲ್ಲಾ ಗೌರವ ಸಲಹ ಸಮಿತಿ ಅಧ್ಯಕ್ಷರಾದ ಪ್ರಕಾಶಯ್ಯ ನಂದಿ ಮಾತನಾಡಿ ಯುವಜನರು ಹೆಚ್ಚು ಸಾಂಸ್ಕೃತಿಕ ಚಟುವಟಿಕೆ ಗಳಲ್ಲಿ ತೊಡಗಬೇಕು, ದುಶ್ಚಟಗಳಿಂದ ದೂರ ಉಳಿಯಬೇಕು ಎಂದು ಕರೆ ನೀಡಿದರು.

ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಸಾಂಕೇತ್ ಕುಮಾರ್ ನಂದಿ ಮುಂದಿನ ದಿನಗಳಲ್ಲಿ ರಾಯಚೂರು ಜಿಲ್ಲಾದ್ಯಂತ ಜಿಲ್ಲಾ ಯುಎನ್ಎ ಕಾರ್ಯಕ್ರಮ, ಜಿಲ್ಲಾ ಮಟ್ಟದಲ್ಲಿ ಯುವ ಸಂಪರ್ಕ ಸಭೆ, ವಜನಾ ಮೇಳಗನ್ನು ಆಯೋಜಿಸಿ ಯುವಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು
ತಿಳಿಸಿದರು.

ಕಲ್ಯಾಣ ಕರ್ನಾಟಕ ಕನ್ನಡ ಜಾನಪದ ಪರಿಷತ್ ವಿಭಾಗೀಯ ಸಂಚಾಲಕ ಡಾ ಶರಣಪ್ಪ ಗೋನಾಳ್ ರವರು ಜನಪದ ಗೀತೆಗಳು ಹಾಡುವ ಮೂಲಕ ಮಕ್ಕಳಲ್ಲಿ ಜಾನಪದ ಪ್ರಜ್ಞೆ ಮೂಡಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಸುಶೀಲ, ಸಿಆರ್‌ಪಿ ಸುರೇಶ್, ಶಿಕ್ಷಕರಾದ ವೀರಭದ್ರಪ್ಪ, ಮಲ್ಲಿಕಾರ್ಜುನ, ಪಾರ್ವತಿ, ಯುವ ಒಕ್ಕೂಟದ ಪದಾಧಿಕಾರಿಗಳು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.