ಚಾಮರಾಜನಗರ: ಮೀನು ಹಿಡಿಯಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆ.
ಚಾಮರಾಜನಗರ ತಾಲೂಕಿನ ಅಟ್ಟುಗೂಳಿಪುರ ಗ್ರಾಮದ ನಿವಾಸಿ ಶಿವಸ್ವಾಮಿ (24) ಮೃತಪಟ್ಟ ಯುವಕ.
ಗೆಳೆಯ ದಿಲೀಪ್ ಕುಮಾರ್ ಜೊತೆ ಸುವರ್ಣಾವತಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಸೋಮವಾರ ರಾತ್ರಿ ತೆಪ್ಪದಲ್ಲಿ ಶಿವಸ್ವಾಮಿ ತೆರಳಿದ್ದರು.ಈ ಸಂದರ್ಭದಲ್ಲಿ ತೆಪ್ಪ ಮಗುಚಿದೆ,ಹಾಗಾಗಿ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.ಆದರೆ ದಿಲೀಪ್ ಕುಮಾರ್ ಈಜಿ ದಡ ಸೇರಿದ್ದಾರೆ, ಶಿವಸ್ವಾಮಿ ಈಜಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ವಿಷಯ ತಿಳಿದ ಕೂಡಲೇ ಪೂರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹ ಹುಡುಕಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
