ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿಕುಂಭಾಭಿಷೇಕ

Spread the love

ಮೈಸೂರು: ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಶ್ರೀ ಸ್ವಾಮಿಯ ಕುಂಭಾಭಿಷೇಕ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಇದೇ ವೇಳೆ‌ ಅಖಂಡ ಮಹಾ ಸುದರ್ಶನ ಹೋಮ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯ ನೆರವೇರಿದವು.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ರಘುಲಾಲ್ ಅಂಡ್ ಕಂಪನಿ ಮುಖ್ಯಸ್ಥರಾದ ರಘುಲಾಲ್ ರಾಘವನ್ ದಂಪತಿ‌ ಪಾಲ್ಗೊಂಡಿದ್ದರು.

ಈ ವೇಳೆ ದೇವಾಲಯದ ಸಂಸ್ಥಾಪಕರಾದ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ, ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಮತ್ತಿತರರು ಉಪಸ್ಥಿತರಿದ್ದರು.