ಮೈಸೂರು: ಹೆಸರಾಂತ ಯೋಗಗುರು ಮೈಸೂರಿನ ಶರತ್ ಜೋಯಿಸ್ ಅವರಿಗೆ
ಅಪೂರ್ವ ಸ್ನೇಹ ಬಳಗ ಹಾಗೂ ಜನಮನ ವೇದಿಕೆ ವತಿಯಿಂದ ಸಂತಾಪ ಸಲ್ಲಿಸಲಾಯಿತು.
ಅಮೇರಿಕ ಪ್ರವಾಸದ ವೇಳೆ ಶರತ್ ಜೋಯಿಸ್ ಹೃದಯಾಘಾತದಿಂದ ನಿಧನರಾಗಿದ್ದು, ಅವರಿಗೆ ಅಪೂರ್ವ ಸ್ನೇಹ ಬಳಗ ಹಾಗೂ ಜನಮನ ವೇದಿಕೆ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಅವರ ಭಾವಚಿತ್ರ ಹಿಡಿದು ಮೇಣದ ಬತ್ತಿ ಬೆಳಗಿಸುವ ಮೂಲಕ ಸಂತಾಪ ಸಲ್ಲಿಸಲಾಯಿತು.
ಶರತ್ ಅವರು ಮೈಸೂರಿನ ಯೋಗ ಪರಂಪರೆಯಲ್ಲಿ ಮುಕುಟ ಪ್ರಾಯರಾಗಿದ್ದ ದಿವಂಗತ ಕೆ.ಪಟ್ಟಾಭಿ ಜೋಯಿಸರ ಮೊಮ್ಮಗ.
ಅಷ್ಟಾಂಗ ಯೋಗವನ್ನು ಜಗತ್ ಪ್ರಸಿದ್ಧಗೊಳಿಸಿ ಅನೇಕ ದೇಶಗಳಿಂದ ಯೋಗ ವಿದ್ಯಾರ್ಥಿಗಳನ್ನು ಮೈಸೂರಿನೆಡೆಗೆ ಸೆಳೆದು, ಮೈಸೂರಿಗೆ ಪಟ್ಟಾಭಿ ಜೋಯಿಸ್ ಹಾಗೂ ಶರತ್ ಜೋಯಿಸ್ ಕೀರ್ತಿ ತಂದಿದ್ದಾರೆ ಎಂದು ಅಪೂರ್ವ ಸ್ನೇಹ ಬಳಗ ಹಾಗೂ ಜನಮನ ವೇದಿಕೆಯವರು ಬಣ್ಣಿಸಿದರು.

ಮೈಸೂರಿನ ಗೋಕುಲಂ ಹಾಗೂ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಯೋಗ ಶಾಲೆ ನಡೆಸುತ್ತಿದ್ದರು ಮತ್ತು ವಿದೇಶ ಪ್ರವಾಸ ಮಾಡಿ ಅಲ್ಲಿಯೂ ಯೋಗ ತರಗತಿಗಳನ್ನು ನಡೆಸುತ್ತಿದ್ದರು. ಅವರು ಹಲವಾರು ಜಾಗತಿಕ ಪ್ರಸಿದ್ಧ ವ್ಯಕ್ತಿಗಳಿಗೆ ಅಷ್ಟಾಂಗ ಯೋಗವನ್ನು ಕಲಿಸಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಮ ವಿ ರಾಮ್ ಪ್ರಸಾದ್ ಸಂತಾಪ ಸೂಚಿಸಿದರು.

ಬಿಜೆಪಿ ಚಾಮುಂಡೇಶ್ವರಿ ನಗರ ಅಧ್ಯಕ್ಷ ರಾಕೇಶ್ ಭಟ್,ಕಡಕೋಳ ಜಗದೀಶ್, ಅಪೂರ್ವ ಸುರೇಶ್, ಪರಿಸರ ಪ್ರೇಮಿ ಭಾನುಮೋಹನ್, ನಾಗೇಂದ್ರ, ವೆಂಕಟರಾವ್,ಮಹಾನ್ ಶ್ರೇಯಸ್, ಸುಚಿಂದ್ರ, ಅರವಿಂದ, ಸೋಮೇಶ್, ಪ್ರಕಾಶ್ ಅರಸ್, ರಾಮು, ಲಕ್ಷ್ಮಣ, ಮಧು, ಚಂದ್ರಶೇಖರ್, ಮಹೇಶ್, ಯೋಗೇಶ್ ಯಾದವ್, ರಾಜೇಂದ್ರ, ಮಹೇಶ್ ಅರಸ್, ಶ್ರೀಕಾಂತ್ ಕಶ್ಯಪ್ ಮತ್ತಿತರರು ಹಾಜರಿದ್ದರು