ಬಿಜೆಪಿ ರಿಪೇರಿಯಾಗದಿದ್ದರೆ ಬೇರೆ ಪಕ್ಷ ಕಟ್ಟಿ ಸಿಎಂ ಆಗುವೆ-ಯತ್ನಾಳ್

Spread the love

ಮೈಸೂರು: ಬಿಜೆಪಿ ರಿಪೇರಿಯಾದರೆ ಆ ಪಕ್ಷದ ಜೊತೆ ಹೋಗುತ್ತೇನೆ ಇಲ್ಲದಿದ್ದರೆ ಹೊಸ ಪಕ್ಷ ಕಟ್ಟಿ ಸಿಎಂ ಆಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾರ್ಯಕರ್ತರು ಮದ್ದೂರಿಗೆ ಬರಬೇಕು ಅಂತ ಕೇಳುತ್ತಿದ್ದಾರೆ,ಬಿಜೆಪಿ ನಾಯಕರು ಹೋದಾಗ ಯತ್ನಾಳ ಯತ್ನಾಳ ಅಂತ ಕೂಗಿದರು. ಅವರ ಹೃದಯದಲ್ಲಿ ನನ್ನ ಮೇಲೆ ಪ್ರೀತಿ ಇದೆ ಎಂದು ತಿಳಿಸಿದರು.

ಗಣಪತಿ ವಿಸರ್ಜನೆ ವೇಳೆ ಈ ಸರ್ಕಾರದಲ್ಲಿ ಆಗುತ್ತಿರುವ ಅನಾಹುತಗಳು ಜನ ನೋಡುತ್ತಿದ್ದಾರೆ. ಹಿಂದೂ ವಿರೋಧಿ ನೀತಿ ಅನುಸರಿದರೆ ಈ ಸರ್ಕಾರ ಪೂರ್ಣಾವಧಿ ಇರಲ್ಲ ನೇಪಾಳ ರೀತಿಯಲ್ಲಿ ಆಗತ್ತದೆ ಎಂದು ಯತ್ನಾಳ್ ಎಚ್ಚರಿಸಿದರು.

ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ಕೂಡಿದೆ. ಅದರಲ್ಲಿ ಬಿಜೆಪಿ ನಾಯಕರು ಕೂಡ ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ,
ಮುಸ್ಲಿಂ ಸಮುದಾಯಕ್ಕೆ ಆಗೋ ಕೆಲಸ ಹಿಂದುಗಳಿಗೆ ಆಗುತ್ತಿಲ್ಲ ಎಂದು ಆರೋಪಿಸಿದರು.

ಮದ್ದೂರಿನಲ್ಲಿ ತಮ್ಮ ವಿರುದ್ಧ ಎಫ್ಐಆರ್ ಆಗಿರುವ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಅಲ್ಲಿ ಅಕ್ರಮ ಮಸೀದಿ ಇದೆ. ಅದಕ್ಕೆ ದಾಖಲೆ ಇಲ್ಲ. ಅಂತಹ ಕಡೆ ಕಲ್ಲುಗಳನ್ನು ಹೊಡೆದರೆ ಏನು ಮಾಡಬೇಕು. ಸರ್ಕಾರ ಏನು ಕತ್ತೆ ಕಾಯುತ್ತಿದೆಯಾ? ಇನ್ಮುಂದೆ ಮಸೀದಿ ಸಂಪೂರ್ಣ ತಪಾಸಣೆ ಆಗಬೇಕು. ಕಲ್ಲು ಶಸ್ತ್ರಾಸ್ತ್ರ ಇದ್ದರೆ ಆ ಮಸೀದಿಯ ಮೌಲ್ವಿಯ ಜವಾಬ್ದಾರಿ ಅಂತ ಹೇಳಬೇಕು. ಇಲ್ಲದಿದ್ದರೆ ಅಂತ ಕಟ್ಟಡ ಕೆಡವಬೇಕು ಅಂತ ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ,ನನ್ನ ಮೇಲೆ ಎಸ್ಟು ಕೇಸು ಬೇಕಾದರೂ ಹಾಕಲಿ. ಈಗಾಗಲೇ 70 ಕೇಸ್ ಹಾಕಿದ್ದಾರೆ. ಇದಕ್ಕೆಲ್ಲ ನಾನು ಹೆದರಲ್ಲ ಎಂದು ಟಾಂಗ್ ನೀಡಿದರು.

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಶಿವಮೊಗ್ಗದಲ್ಲಿ ಗಲಾಟೆ ಆಯಿತು. ಆಗ ಯಡಿಯೂರಪ್ಪ ಏನು ಕ್ರಮ ತೆಗೆದುಕೊಳ್ಳಲಿಲ್ಲ. ಕಠಿಣ ಕ್ರಮ, ಕಠಿಣ ಕ್ರಮ ಅಂತ ಹೇಳೋ ಗೃಹ ಮಂತ್ರಿ ಮಾಡಿದ್ದರು. ಅದಕ್ಕಾಗಿ ಬಿಜೆಪಿ ನೆಲ ಕಚ್ಚಿತ್ತು. ಈಗ ಮತ್ತೆ ಯಡಿಯೂರಪ್ಪ ಮಗ ಬಂದಿದ್ದಾರೆ . ಏನು ಮಾಡುತ್ತಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಕೊಡುಗೆ ಏನು, ಒಕ್ಕಲಿಗರ ಸಮುದಾಯಕ್ಕೆ ಡಿಕೆಶಿ ಕೊಡುಗೆ ಏನು ಯತ್ನಾಳ್ ಪ್ರಶ್ನಿಸಿದರು.

ನಮ್ಮ ಪ್ರಧಾನಿಗಳು ಹೇಳುತ್ತಾರೆ. ನಾನು ತಿನ್ನಲ್ಲ ತಿನ್ನೂರಿಗೂ ಬಿಡಲ್ಲ ಅಂತ. ಆದರೆ ಇಲ್ಲಿ ಯಡಿಯೂರಪ್ಪ ಕುಟುಂಬ ಹಣ ಲೂಟಿ ಮಾಡಿದೆ. ಇದಕ್ಕೆ ಏನು ಹೇಳಬೇಕು ಎಂದು ಕಾರವಾಗಿ ಪ್ರಶ್ನಿಸಿದರು

ಚಾಮುಂಡಿ ತಾಯಿಗೆ ಹೂವು ಹಾಕೋರು ಸನಾತನಿಗಳು ಆಗಿರಬೇಕು. ಮೂರ್ತಿ ಪೂಜೆ ಮಾಡಲ್ಲ ಅಂತ ವಿರೋಧಿಸುವವರಿಂದ ದಸರಾ ಉದ್ಘಾಟನೆ ಸರಿಯಲ್ಲ,ಬಾನು ಮುಷ್ತಾಕ್ ಬೇಕಾದರೆ ಬೇರೆ ಬೇರೆ ಕಾರ್ಯಕ್ರಮ ಉದ್ಘಾಟನೆ ಮಾಡಲಿ ಎಂದು ‌ಬಸವನಗೌಡ ಪಾಟೀಲ್‌ ಹೇಳಿದರು.

ಪ್ರದೀಪ್ ಈಶ್ವರ್ ಕೋತಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ನಾನು ಮನುಷ್ಯರ ಹೇಳಿಕೆಗೆ ಅಷ್ಟೇ ಉತ್ತರ ಕೊಡುತ್ತೇನೆ. ಇಂತಹ ಬಾಲಿಶ ಹೇಳಿಕೆ ಕೊಡೋರಿಗೆ ಉತ್ತರ ಕೊಡಲ್ಲ ಎಂದು ತಿರುಗೇಟು ನೀಡಿದರು.