ಮೈಸೂರು: ಮೈಸೂರು ಮಹಾರಾಜರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಗಳಿಗೆ ತನ್ನ ತಂದೆಯನ್ನು ಹೋಲಿಸಿರುವ ಡಾ.ಯತೀಂದ್ರ ಹೇಳಿಕೆಯನ್ನು ವಿವಿಧ ಮುಖಂಡರು ಖಂಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ಚಲನ ಚಿತ್ರ ನಟ ಎಸ್ ಜಯಪ್ರಕಾಶ್ ಅವರು, ಕೂಡಲೇ ಯತೀಂದ್ರ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಬೋಗಾದಿ ಸಿದ್ದೇಗೌಡ,ವರಕೂಡು ಕೃಷ್ಣೇಗೌಡ, ಭಾಗ್ಯಮ್ಮ, ಹನುಮಂತಯ್ಯ, ಡಾ. ಶಾಂತರಾಜೇ ಅರಸ್, ಹೊನ್ನೇಗೌಡ, ಹನುಮಂತೇಗೌಡ ಮತ್ತಿತರರು ಕೂಡಾ ಡಾ.ಯತೀಂದ್ರ ಅವರ ಹೇಳಿಕೆಯನ್ನು ಖಂಡಿಸಿದರು.