ಮೈಸೂರು, ಜು.1: ಜಿಲ್ಲೆಯ ಹುಣಸೂರು ತಾಲೂಕಿನ ಯಮಗುಂಬ ಗ್ರಾಮದಲ್ಲಿ
ಕಾಮಗಾರಿ ನಡೆದ ಒಂದೇ ವರ್ಷಕ್ಕೆ ಡಾಂಬರು ಕಿತ್ತುಹೋಗಿ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳಪೆ ಕಾಮಗಾರಿ ಎಂದು ಆರೋಪಿಸಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ
ಗಣಿಗೆ ಸಂಬಂಧಿಸಿದ ಭಾರಿ ವಾಹನ ಓಡಾಡಿದ ಪರಿಣಾಮ ರಸ್ತೆ ಹದಗೆಟ್ಟಿದೆ ಎಂದು ಗ್ರಾಮದ ಜನ ದೂರಿದ್ದಾರೆ.
ಕೂಡಲೇ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿ ಮಾಡಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಯಮಗುಂಬ ಗ್ರಾಮದ ಜನತೆ ಆಗ್ರಹಿಸಿದ್ದಾರೆ.
ರಸ್ತೆ ಸರಿಪಡಿಸದಿದ್ದಲ್ಲಿ ಪ್ರತಿಭಟನೆ ನಡೆಸು ವುದಾಗಿ ಎಚ್ಚರಿಸಿದ್ದಾರೆ.
ಹುಣಸೂರು ತಾಲೂಕು ಹೊಸಕೊಪ್ಪಲು ಯಮಗುಂಬ ಗ್ರಾಮದ ಮಾರ್ಗವಾಗಿ ಹಬ್ಬನಕುಪ್ಪೆಗೆ ತೆರಳುವ ರಸ್ತೆಗೆ ಕಳೆದ ವರ್ಷ ಡಾಂಬರೀಕರಣ ಮಾಡಿ ಅಭಿವೃದ್ದಿಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಲಾಗಿತ್ತು.
ಸಮೀಪದಲ್ಲಿ ಗಣಿಯೊಂದರ ಭಾರಿ ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿರುವ ಕಾರಣ ಡಾಂಬರು ಕಿತ್ತು ರಸ್ತೆ ಕಿತ್ತುಬಂದಿದೆ.
ಇದಕ್ಕೆಲ್ಲಾ ಗಣಿಗೆ ಸೇರಿದ ಭಾರಿವಾಹನಗಳ ಓಡಾಟ ಎಂದು ಜನತೆ ಕಿಡಿಕಾರಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದರೆ ಗಣಿ ಮಾಲೀಕರು ಈ ರಸ್ತೆ ಇರುವುದೇ ನಮಗಾಗಿ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೂಡಲೇ ದುರಸ್ತಿಗೊಳಿಸಿ ಭಾರಿ ವಾಹನಗಳಿಗೆ ನಿರ್ಬಂಧ ಹೇರದಿದ್ದಲ್ಲಿ ಜಿಲ್ಲಾಡಳಿತದ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.