ಯಾದಗಿರಿ: ಸರ್ಕಾರಿ ಶಾಲೆಗಳು ಅಭಿವೃದ್ಧಿ ಆಗಬೇಕು,ಮಕ್ಕಳು ಸರ್ಕಾರಿ ಶಾಲೆಗೇ ಸೇರಬೇಕು ಎಂದೆಲ್ಲಾ ಬೊಬ್ಬೆ ಹೊಡೆಯುವ ಸರ್ಕಾರಗಳಿಗೆ ಶಾಲೆಯ ಮೇಲ್ಚಾವಣಿ ಕುಸಿದಿರುವುದು ಗೊತ್ತೇ ಆಗುವುದಿಲ್ಲ.
ಯಾದಗಿರಿ ಜಿಲ್ಲೆಯ ವಡಿಗೇರಾ ತಾಲ್ಲೂಕಿನ ರೊಟ್ನಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿದಿದ್ದು,ಮಕ್ಕಳು ಆತಂಕದಿಂದ ಶಾಲೆಯ ಹೊರಗಡೆ ಬಯಲಲ್ಲಿ ಪಾಠ ಕಲಿಯುವ ಸ್ಥಿತಿ ನಿರ್ಮಾಣವಾಗಿದೆ.
ಈ ಶಾಲೆಯಲ್ಲಿ 100 ಮಕ್ಕಳ ಹಾಜರಾತಿ ಇದೆ,ಆದರೆ ಇಲ್ಲಿರುವುದು ಒಬ್ಬರೇ ಖಾಯಂ ಶಿಕ್ಷಕರು!
ಶಾಲಾ ಕೊಠಡಿಗಳ ಮೇಲ್ಚಾವಣಿಯಿಂದ ಸಿಮೆಂಟ್ ಉದುರಿ ಬೀಳುತ್ತಿದ್ದು,ಅದು
ಯಾವಾಗ ಬೀಳುತ್ತೋ ಎಂಬ ಭಯದಿಂದ ಶಿಕ್ಷಕರು ಮಕ್ಕಳಿಗೆ ಹೊರಗಡೆ ಪಾಠ ಮಾಡುತ್ತಾರೆ.

ಇಂತಹ ಪರಿಸ್ಥಿತಿ ಇದ್ದರೂ ಅಧಿಕಾರಿಗಳ ಬೇಜಾದ್ದಾರಿ ತೋರಿದ್ದಾರೆ.
ಹಲವು ಭಾರೀ ಹೊಸ ಕಟ್ಟಡಕ್ಕೆ ಮನವಿ ಸಲ್ಲಿಸಿದ್ದರೂ ಶಿಕ್ಷಣ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಈ ಶಾಲೆಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಸಹ ಇಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆ,ಚಳಿಯಲ್ಲೇ ಮಕ್ಕಳು ಪಾಠ ಕಲಿಯಬೇಕಿದೆ.ಸರ್ಕಾರಿ ಶಾಲೆ ಉಳಿಯಬೇಕೆಂದು ಭಾಷಣ ಬಿಗಿಯುವುದು ಬಿಟ್ಟು ಕೂಡಲೇ ಇಂತಹ ಶಾಲೆಗಳಿಗೆ ಕಾಯಕಲ್ಪ ಮಾಡಲಿ.
ಯಾವುದೇ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಈ ಶಾಲೆಗೆಭೇಟಿ ನೀಡಿ ಕಟ್ಟಡವನ್ನು ಸರಿಪಡಿಸಲಿ.