ಯಾದಗಿರಿ: ಕಿಡಿಗೇಡಿಗಳು ತಡರಾತ್ರಿ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬೆಂಕಿಯಿಟ್ಟಿದ್ದಾರೆ.

ಕಿಡಿಗೇಡಿಗಳು ಶುಕ್ರವಾರ ಮಧ್ಯರಾತ್ರಿ ಅಂದರೆ ಶನಿವಾರ ಮುಂಜಾನೆ ಸುಮಾರು ಎರಡು ಗಂಟೆ ವೇಳೆ ಪೆಟ್ರೋಲ್ ಸುರಿದು ಕಾಂಗ್ರೆಸ್ ಕಚೇರಿಗೆ ಬೆಂಕಿಯಿಟ್ಟಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿದ್ದ ಸೋಪಾ, ಎಸಿ ಹಾಗೂ ಕಿಟಕಿಗಳು ಸುಟ್ಟು ಕರಕಲಾಗಿವೆ.

ಯಾದಗಿರಿ ನಗರದ ಕನಕ ವೃತ್ತದ ಸಮೀಪ ಕಾಂಗ್ರೆಸ್ ಕಚೇರಿ ಇದ್ದು,ಅದು ಯಾವ ಕಾರಣಕ್ಕೆ ಬೆಂಕಿ ಹಚ್ಚಲಾಗಿದೆ ಎಂಬುದು ಗೊತ್ತಾಗಿಲ್ಲ.
ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಬಸರಡ್ಡಿ ಪಾಟೀಲ್ ಅನಪೂರ ಅವರು ಈ ಕುರಿತು ಮಾತನಾಡಿದ್ದು,ರಾತ್ರಿ ಬಹಳ ಹೊತ್ತು ಕಚೇರಿಯಲ್ಲೇ ಇದ್ದೆವು.ಬಹುಶಃ ಮಧ್ಯರಾತ್ರಿ ಎರಡು ಗಂಟೆ ವೇಳೆ ಬೆಂಕಿ ಹಚ್ಚಿರಬಹುದು ಇಂದು ಕಚೇರಿಗೆ ಬಂದಾಗ ಘಟನೆ ಗೊತ್ತಾಯಿತು ಎಂದು ಹೇಳಿದ್ದಾರೆ.

ಯಾರು ಯಾವ ಕಾರಣಕ್ಕೆ ಬೆಂಕಿ ಹಚ್ಚಿದ್ದಾರೆಂದು ಗೊತ್ತಿಲ್ಲ ಪೊಲೀಸರಿಗೆ ತಿಳಿಸಿದ್ದೇವೆ ಎಂದು ತಿಳಿಸಿದರು.
ವಿಷಯ ತಿಳಿಯುತ್ತಿದ್ದಂತೆ
ಕಾಂಗ್ರೆಸ್ ಕಚೇರಿಗೆ ಪೊಲೀಸ್ ಅಧಿಕಾರಿಗಳು
ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರು ಸೇರಿ ಪರಿಶೀಲನೆ ನಡೆಸಿದರು.

ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿ ಪೆಟ್ರೋಲ್ ಕ್ಯಾನ್ ಅಲ್ಲೇ ಬಿಸಾಕಿ ಹೋಗಿದ್ದಾರೆ.
ಸುದ್ದಿ ಹರಡುತ್ತಿದಂತೆ ಕಾಂಗ್ರೆಸ್ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಸೇರಿ ಕಿಡಿಗೇಡಿಗಳನ್ನು ಹಿಡಿದು ಶಿಕ್ಷಿಸಬೇಕೆಂದು ಆಗ್ರಹಿಸಿದರು.