ಬರಹಗಾರನಿಗೆ ಬಹುದೊಡ್ಡ ಜವಾಬ್ದಾರಿ ಇರುತ್ತದೆ:ಬಿ.ಟಿ.ಲಲಿತಾ ನಾಯಕ್

Spread the love

ಕೊಳ್ಳೇಗಾಲ: ಕಾದಂಬರಿಗಳು ಹಲವರ ಜೀವನ ಬದಲಾಯಿಸಿರುವ ನಿದರ್ಶನಗಳಿವೆ ಎಂದು ಖ್ಯಾತ ಸಾಹಿತಿ ಹಾಗೂ ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾ ನಾಯಕ್ ತಿಳಿಸಿದರು.

ಪಟ್ಟಣದ ಅರುಣಾಚಲೇಶ್ವರ ಸಭಾಂಗಣದಲ್ಲಿ ಸಾಹಿತ್ಯ ಮಿತ್ರ ಕೂಟ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಾದಂಬರಿಗಳಿಗೆ ಪ್ರಶಸ್ತಿ ಬಂದಿದೆ ಎಂದರೆ ಅದರಲ್ಲಿ ಜೀವನದ ಸತ್ಯದರ್ಶನದ ಮಜಲುಗಳು ತೆರೆದುಕೊಂಡಿರುತ್ತದೆ. ಅಲ್ಲಿ ಬರಹಗಾರ ಬಿತ್ತಿದಂತೆ ಸಮಾಜವನ್ನು ಬೆಳೆಸಬಹುದಾಗಿದೆ ಹಾಗಾಗಿ ಬರಹಗಾರನಿಗೆ ಬಹುದೊಡ್ಡ ಜವಾಬ್ದಾರಿಯೂ ಇರುತ್ತದೆ ಎಂದು ಹೇಳಿದರು.

ಪ್ರಸ್ತುತ ಆಯ್ಕೆಯಾಗಿರುವ ಕಾದಂಬರಿಗಳು ಬಹಳ ಪ್ರಬುಧ್ಧವಾಗಿರುವುದರಿಂದಲೇ ಅವುಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ,
ಕಾದಂಬರಿ ಬರೆಯುವವರನ್ನು ಓದುಗರ ಗಮನಸೆಳೆಯಲು ಸಾಹಿತ್ಯ ಮಿತ್ರಕೂಟ ಮಾಡುತ್ತಿರುವ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾದಂಬರಿಗಳ ಕುರಿತು ಮಾತನಾಡಿದ ಮೈಸೂರು ಕೃಷ್ಣಮೂರ್ತಿಯವರು ಬರೆಯುವರ ಸಂಖ್ಯೆ ಹೆಚ್ಚುತ್ತಿದೆ ಓದುಗರ ಮತ್ತು ವಿಮರ್ಶಿಸುವರ ಸಂಖ್ಯೆ ಕಡಿಮೆಯಾಗುತ್ತಿದೆ ಪ್ರಸ್ತುತ ಜನ ಮೊಬೈಲ್, ಸೀರಿಯಲ್ ಸಂಸ್ಕೃತಿ ಬೆಳೆಸಿಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಶಸ್ತಿ ವಿಜೇತರಾದ ಬಂಗಿದೊಡ್ಡ ಮಂಜುನಾಥ, ಕಾರ್ತಿಕಾದಿತ್ಯ, ಎಮ್ ಜಿ ಮಂಜುನಾಥ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿ ನಗದು ಬಹುಮಾನ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತ್ಯ ಮಿತ್ರಕೂಟದ ಅಧ್ಯಕ್ಷ ಮದ್ದೂರುದೊರೆಸ್ವಾಮಿ ವಹಿಸಿದ್ದರು, ಸ್ಥಾಪಕ ಅಧ್ಯಕ್ಷ,ಪ್ರೊ.ದೊಡ್ಡಲಿಂಗೇಗೌಡ, ಕಾರ್ಯದರ್ಶಿ ಸತೀಸ್, ಖಜಾಂಚಿ ಮಂಜುನಾಥ ಬಾಳಗುಣಸೆ, ಉಪಾಧ್ಯಕ್ಷ ನಂ ರಮೇಶ್, ನಿರ್ದೇಶಕರಾದ ಚನ್ನಮಾದೇಗೌಡ, ಪಳನಿಸ್ವಾಮಿ ಜಾಗೇರಿ,  ಶಂಕರ್, ಕೋಮಲ, ಕಾತ್ಯಾಯಿನಿ ಮತ್ತಿತರು ಉಪಸ್ಥಿತರಿದ್ದರು.