ಮೈಸೂರು- ಮಾನದವಾಡಿ ಮುಖ್ಯ ರಸ್ತೆ:ರಾತ್ರಿ ಹಾಕಿದ ಡಾಂಬರು ಬೆಳಿಗ್ಗೆ ಕೈಗೆ!

ಮೈಸೂರು: ಮೈಸೂರು- ಮಾನದವಾಡಿ ಮುಖ್ಯ ರಸ್ತೆ ರಿಪೇರಿ ಕೆಲಸವೇನೋ ಮುಗಿದಿದೆ.ಆದರೆ ರಾತ್ರಿ ಹಾಕಿದ್ದ‌ ಡಾಂಬರು ಬೆಳಿಗ್ಗೇನೆ ಕಿತ್ತು ಬಂದಿದೆ.

ಈ ರಸ್ತೆ ರಿಪೇರಿ ಕೆಲಸ ಕಳೆದ ವರ್ಷದಿಂದ ಕುಂಟುತ್ತಲೆ ಸಾಗಿತ್ತು.ದೂಳುಮಾಯವಾಗಿ ಸಮೀಪದ ಜನತೆ ತೊಂದರೆ ಅನುಭವಿಸಿದ್ದರು.

ಅಂತೂ ಇಂತೂ ಕಡೆಗೂ ಕಾಮಗಾರಿ ಮುಗಿದು ಡಂಬರಿಂಗ್ ಕಾರ್ಯ ನಡೆಯುತ್ತಿದೆ.ವಿಪರ್ಯಾಸವೆಂದರೆ ನಿನ್ನೆ ರಾತ್ರಿ ಈ ಡಂಬರು ಹಾಕಿದ್ದು ಇಂದು ಬೆಳಿಗ್ಗೆನೇ ಕಿತ್ತು ಬಂದಿದೆ.ಆ ಮಟ್ಟಕ್ಕೆ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಭಾರತೀಯ ಕಿಸಾನ್ (ರೈತ) ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಗಂಡತೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಳಪೆ ಕಾಮಗಾರಿಯನ್ನು ಸ್ಥಳೀಯ ಯುವಕರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.ಕಾಮಗಾರಿ‌ ಬಗ್ಗೆ ಪ್ರಶ್ನಿಸಿದರೆ ಗುತ್ತಿಗೆದಾರನ ಕಡೆಯವರು ನಾವು ಕಾನೂನು ಪ್ರಕಾರ ಮಾಡಿದ್ದೇವೆ ಬೇಕಿದ್ದರೆ ನೀವೇ ಕೇಳಿ ಎಂದು ಉತ್ತರಿಸಿದ್ದಾರೆ.

ಯುವಕರು ತಮ್ಮ ಕೈನಲೇ ಡಾಂಬರು ಕೀಳುತ್ತಿರುವ ದೃಶ್ಯ ಕಣ್ಣಿಗೆ ರಾಚುತ್ತಿದೆ ಇದಕ್ಕಿಂತಲೂ ಹೆಚ್ಚಿನ ಸಾಕ್ಷಿ ಬೇಕೆ ಎಂದು
ರವಿ ಗುಂಡತ್ತೂರು ಪ್ರಶ್ನಿಸಿದ್ದಾರೆ.

ತಕ್ಷಣವೇ ಈ ಕಳಪೆ ಕಾಮಗಾರಿ ನಿಲ್ಲಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹತ್ತರು ವರ್ಷ ನಾವು ಈ ರಸ್ತೆಯಲೇ ಓಡಾಡಬೇಕು ಕೇರಳಕ್ಕೆ ಹೋಗುವ ದೊಡ್ಡ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಓಡಾಡಿದರೆ ಮತ್ತು ಮಳೆಗಾಲದಲ್ಲಿ ಬಹಳ ಸಮಸ್ಯೆ ಆಗಲಿದೆ.

ಸಂಬಂಧ ಪಟ್ಟ ಅಧಿಕಾರಿಗಳು ಈ‌ ಭಾಗದ ಜನಪ್ರತಿನಿಧಿಗಳು ಕೂಡಲೇ ಈ ಕುರಿತು ಕ್ರಮ ವಹಿಸಬೇಕು,ಗುತ್ತಿಗೆದಾರನನ್ನು
ಅಮಾನತು ಮಾಡಿ ಬೇರೆ ಗುತ್ತಿಗೆದಾರನಿಗೆ ನೀಡಿ ಒಂದು ಸುಂದರ ರಸ್ತೆ ನಿರ್ಮಾಣ ಮಾಡಿಸಲಿ ಎಂದು ರವಿ ಗಂಡತೂರು ಆಗ್ರಹಿಸಿದ್ದಾರೆ.