ವೃದ್ದಾಪ್ಯ‌ ವೇತನ‌ ಹೆಚ್ಚಳಕ್ಕೆಎಸ್ ಪ್ರಕಾಶ್ ಪ್ರಿಯದರ್ಶನ್ ಆಗ್ರಹ

Spread the love

ಮೈಸೂರು: ಅವಿಭಕ್ತ ಕುಟುಂಬಗಳು ಮರೆಯಾಗುತ್ತಿರುವುದರಿಂದ ಮಕ್ಕಳು ಯುವಕರಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ ಸಂಸ್ಕಾರ ಮರೆಯಾಗಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ ಎಂದು ಜೆಡಿಎಸ್ ಕಾರ್ಯದಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಆತಂಕ ವ್ಯಕ್ತಪಡಿಸಿದರು.

ನಗರದ ಸುಯೋಜ್ ಫಾರ್ಮ್ ರಸ್ತೆಯಲ್ಲಿರುವ ಭಾರತಿ ವೃದ್ಧಾಶ್ರಮದ ಹಿರಿಯ ನಾಗರಿಕರೊಂದಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ಸದಸ್ಯರು ಬೆರೆತು ಯೋಗಕ್ಷೇಮ ವಿಚಾರಿಸಿ ಅವರ ಆಶೀರ್ವಾದ ಪಡೆದು ಎಲ್ಲಾ ಹಿರಿಯರಿಗೆ ಹಣ್ಣು ಹಂಪಲು ಹಾಗೂ ದಿನಸಿ ಸಾಮಾನುಗಳನ್ನು ವಿತರಿಸಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಿದ ವೇಳೆ‌ ಎಸ್ ಪ್ರಕಾಶ್ ಪ್ರಿಯದರ್ಶನ್ ಮಾತನಾಡಿದರು.

ಹಿರಿಯರು ನೀಡುತ್ತಿದ್ದ ಮಾರ್ಗದರ್ಶನ ಇಂದು ಇಲ್ಲವಾಗಿದೆ, ಹಿರಿಯರನ್ನು ನಿರ್ಲಕ್ಷಿಸುತ್ತಿರುವುದು ನೋವಿನ ಸಂಗತಿ, ಅವರ ಬದುಕು ಅತಂತ್ರವಾಗಿದೆ, ಸರ್ಕಾರ ಹಿರಿಯ ನಾಗರಿಕರಿಗೆ ನೀಡುತ್ತಿರುವ 1,200 ವೃದ್ಧಾಪ್ಯವೇತನ ಸಾಕಾಗುತ್ತಿಲ್ಲ, ಕನಿಷ್ಠ 5 ಸಾವಿರಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ ಹೋಮದೇವ್, ರಾಜೇಶ್ ಕುಮಾರ್,ಮಹೇಶ್, ಎಲ್ಐಸಿ ವೆಂಕಟೇಶ್, ನವನೀತ್ ಕುಮಾರ್ , ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್, ದತ್ತ‌ ಮತ್ತಿತರರು ಹಾಜರಿದ್ದರು.