ವಿಶ್ವ ಸುದ್ದಿ ದಿನ-ಮಾಧ್ಯಮದವರಿಗೆಸಿ.ಆರ್. ದಿನೇಶ್ ಶುಭಾಶಯ

Spread the love

ಮೈಸೂರು: ಇಂದು ವಿಶ್ವ ಸುದ್ದಿ ದಿನ.
ಇಡೀ ಪ್ರಪಂಚಕ್ಕೆ ಸುದ್ದಿಯನ್ನು ನೀಡುವ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಎಲ್ಲಾ ಪತ್ರಿಕಾ ಮಾಧ್ಯಮದವರು ಹಾಗೂ ಡಿಜಿಟಲ್ ಮಾಧ್ಯಮದವರಿಗೆ ಪ್ರಾಂಶುಪಾಲರು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸಿ.ಆರ್. ದಿನೇಶ್ ಅವರು ಶುಭಾಶಯ ತಿಳಿಸಿದ್ದಾರೆ.

ಪ್ರಸ್ತುತ ಕಾಲಘಟ್ಟದಲ್ಲಿ ಕೆಲವೊಮ್ಮೆ ಸುಳ್ಳು ಸುದ್ದಿಗಳು ಎಐ ಮೂಲಕ ಪ್ರಕಟವಾಗುವ ಸಂದರ್ಭಗಳು ಹೆಚ್ಚಾಗುತ್ತಿದೆ, ಹಾಗಾಗಿ ಸುದ್ದಿಗಳನ್ನು ಪರಿಶೀಲಿಸಿ ಯಾವುದು ಸತ್ಯ ಯಾವುದು ಸುಳ್ಳು ಹಾಗೂ ಸುದ್ದಿಯ ಸ್ಪಷ್ಟತೆಯ ಬಗ್ಗೆ ಮಾಹಿತಿ ನೀಡುತ್ತಿರುವ ಎಲ್ಲಾ ಸುದ್ದಿ ಮಾಧ್ಯಮದವರಿಗೂ ಶುಭಾಶಯಗಳನ್ನು ಸಲ್ಲಿಸುತ್ತಿದ್ದೇನೆ ಎಂದು ‌
ಸಿ.ಆರ್. ದಿನೇಶ್ ಅವರು ತಿಳಿಸಿದ್ದಾರೆ.