ಪ್ರತಿ ಹೆಣ್ಣು ಶಿಕ್ಷಣ ಪಡೆದು ಎಲ್ಲ ರಂಗದಲ್ಲೂ ಕಾರ್ಯ ನಿರ್ವಹಿಸಲಿ:ರವಿ ಸ್ವಾಮೀಜಿ

Spread the love

ಮೈಸೂರು: ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ಸದಸ್ಯರು ವಿದ್ಯಾರ್ಥಿನಿಯರಿಗೆ ನೋಟ್ ಬುಕ್, ಹಣ್ಣು ಹಂಪಲು ವಿತರಿಸಿದರು.

ವಿದ್ಯಾರಣ್ಯಪುರಂನಲ್ಲಿರುವ ಪಟ್ಟದ ಬಸವಲಿಂಗ ಸ್ವಾಮಿಗಳ (ಟ್ರಸ್ಟ್) ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯದ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ಸದಸ್ಯರು ನೋಟ್ ಬುಕ್, ಹಣ್ಣು ಹಂಪಲು ವಿತರಿಸುವ ಮೂಲಕ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.

ಈ ವೇಳೆ ರವಿ ಸ್ವಾಮೀಜಿ ಯವರು ಮಾತನಾಡಿ ಹೆಣ್ಣೆಂದರೆ ಶಕ್ತಿ, ತಾಳ್ಮೆ ಮತ್ತು ಮಾತೃತ್ವದ ಘನತೆಯನ್ನು ಎತ್ತಿ ತೋರಿಸುತ್ತದೆ
ಎಂದು ಹೇಳಿದರು.

ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು,ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎನ್ನುವ ಗಾದೆಗಳು ಹೆಣ್ಣಿನ ವಿಭಿನ್ನ ವ್ಯಕ್ತಿತ್ವವನ್ನು ತಿಳಿಸುತ್ತವೆ. ಅಲ್ಲದೆ, ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ‌ ಎನ್ನುವ ಸಂಸ್ಕೃತ ಶ್ಲೋಕವು ಹೆಣ್ಣನ್ನು ಸೃಷ್ಟಿಯ ಮೂಲ. ಸ್ತ್ರೀಯಲ್ಲವೇ ದೃಷ್ಟಿಯ ಮೂಲ. ಹೆಣ್ಣಲ್ಲವೇ ನಮ್ಮ ಹಡೆದ ತಾಯಿ. ಹುಟ್ಟಿನಿಂದ ಸಾಯುವ ತನಕ ಹೆಣ್ಣಿನ ಮಹತ್ವ ಮರೆಯುವುದುಂಟೆ. ಪ್ರತಿ ಹೆಣ್ಣು ಮಗು ಶಿಕ್ಷಣವನ್ನು ಪಡೆದು ಎಲ್ಲ ರಂಗದಲ್ಲೂ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ ಹೋಮದೇವ್, ಹಿರಿಯ ಕ್ರೀಡಾಪಟು ಮಹದೇವ್, ಛಾಯಾ, ಗಾಯಕ ಯಶವಂತ್ ಕುಮಾರ್, ರಾಜೇಶ್ ಕುಮಾರ್,ಮಹೇಶ, ಸುಬ್ರಮಣಿ,ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್, ದತ್ತ ಮತ್ತಿತರರು ಹಾಜರಿದ್ದರು.