ಮಾದಕ ವಸ್ತು ಸೇವನೆ ನಮ್ಮ ಸಾವಿಗೆ ನಾವೇ ಆಹ್ವಾನ ಕೊಟ್ಟಂತೆ:ಲಿಂಗಣ್ಣಸ್ವಾಮಿ

ನಂಜನಗೂಡು: ಮಾದಕ ವಸ್ತುಗಳ ಸೇವನೆ ನಮ್ಮ ಸಾವಿಗೆ ನಾವೇ ಆಹ್ವಾನ ಕೊಟ್ಟಂತೆ ಎಂದು ಹಿರಿಯ ಉಪನ್ಯಾಸಕ ಲಿಂಗಣ್ಣಸ್ವಾಮಿ ರವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪ್ರತಿಜ್ಜಾ ವಿಧಿಯನ್ನು ಬೋಧಿಸಿದ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಎಚ್ ಕೆ ಸ್ವಾಮಿ ಗೌಡ ಅವರು ಇಂದಿನ ಯುವ ಪೀಳಿಗೆಯನ್ನು ಆವರಿಸಿದ ಮಾದಕ ವಸ್ತುಗಳು ಅವರ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಅವರು ಮಾತನಾಡಿ ವಿದ್ಯಾರ್ಥಿಗಳು ಕೇವಲ ಸಾಂಕೇತಿಕವಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರೆ ಸಾಲದು ಈ ಪ್ರತಿಜ್ಞಾವಿಧಿಯಲ್ಲಿರುವ ಅಂಶವನ್ನು ಮನಃಪೂರಕವಾಗಿ ಪಾಲಿಸಿದರೆ ಮಾತ್ರ ಇಂತಹ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ತಿಳಿಹೇಳಿದರು.

ದೇಶಕ್ಕೆ ಅಗತ್ಯವಾದ ಯುವಜನರು ತಮ್ಮ ಸಾಮರ್ಥ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕಾದರೆ ಇಂತಹ ಚಟಗಳಿಂದ ದೂರ ಇದ್ದರೆ ಮಾತ್ರ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಂಗಸ್ವಾಮಿ, ಎನ್.ನಾಗರಾಜು, ಡಾ. ಕೆ .ಮಾಲತಿ, ರೂಪ, ಡಾ. ಎ.ಸುಮಾ, ಭವ್ಯ ಸುಮಿತ್ರ ,ಅದಿಲ್ ಹುಸೇನ್, ರಾಮಾನುಜನ, ಮೀನಾ ಎಮ್,ನಾಗರಾಜು ,
ವತ್ಸಲ ,ಪದ್ಮಾವತಿ,ಬಿಂದು ಮತ್ತಿರರು ಪಾಲ್ಗೊಂಡಿದ್ದರು.