ಮೈಸೂರು: ಪ್ರವಾಸೋದ್ಯಮ ಮಂತ್ರಾಲಯ ವತಿಯಿಂದ ಮೈಸೂರಿನ ಐಬಿಸ್ ಸ್ಟೈಲ್ಸ್ ಹೋಟೆಲ್‌ನಲ್ಲಿ ನ.4 ಮತ್ತು 5ರಂದು ಹೋಟೆಲ್ ಸಿಬ್ಬಂದಿಗೆ ಪರ್ಯಟನ್ ಮಿತ್ರ ಮತ್ತು ಪರ್ಯಟನ್ ದೀದಿ ಕಾರ್ಯಕ್ರಮದಡಿ ವಿಶೇಷ ಕೌಶಲ್ಯ ಪ್ರಮಾಣೀಕರಣ ತರಬೇತಿ ಆಯೋಜನೆ ಮಾಡಲಾಗಿದೆ.

ಈ ತರಬೇತಿ ಕಾರ್ಯಕ್ರಮವು ಹೋಟೆಲ್ ಸಿಬ್ಬಂದಿಯ ಪ್ರತಿಭೆಯನ್ನು ಹೆಚ್ಚಿಸಲು ಮತ್ತು ಪ್ರವಾಸೋದ್ಯಮದ ಸೇವಾ ಗುಣಮಟ್ಟವನ್ನು ಸುಧಾರಿಸಲು ನೆರವಾಗುತ್ತದೆ.
ಕಾರ್ಯಕ್ರಮವನ್ನು ಪ್ರವಾಸೋದ್ಯಮ ಮಂತ್ರಾಲಯದ ಪ್ರಾದೇಶಿಕ ನಿರ್ದೇಶಕರಾದ ಡಿ. ವೆಂಕಟೇಶನ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಎಂ.ಕೆ., ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ನಾರಾಯಣಗೌಡ ಉಪಸ್ಥಿತರಿದ್ದರು.
ಈ ತರಬೇತಿ ಕಾರ್ಯಕ್ರಮವು ಹೋಟೆಲ್ ಉದ್ಯಮದಲ್ಲಿ ಸ್ವಚ್ಛತೆ, ನಡವಳಿಕೆಯ ಕೌಶಲ್ಯ ಮತ್ತು ಭಾಷಾ ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದ್ದು, ಉಚಿತವಾಗಿ ನೀಡಲಾಗುತ್ತಿದೆ.
ಹೋಟೇಲ್ ಪೈ ವಿಸ್ತಾ, ದಕ್ಷಿಣ ಪಾಕ, ಲೇ ರುಚಿ, ರೆಜೆಂಟಾ ಹೋಟೆಲ್, ಮರ್ಕುರಿ ಹೋಟೆಲ್, ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ ಕೆ ಎಸ್ ಟಿ ಡಿ ಸಿ ಸಿಬ್ಬಂದಿ ಹಾಗೂ ಮೈಲಾರಿ ಹೋಟೇಲ್ ಸಿಬ್ಬಂದಿ ಉಪಸ್ಥಿತರಿದ್ದರು.