ಮಂಡ್ಯ: ಇತ್ತೀಚೆಗೆ ಈ ಸಾಮಾಜಿಕ ಜಾಲತಾಣಗಳಿಂದ ಪರಿಚಿತರಾಗೋದು,ನಂತರ ಪ್ರೀತಿ,ಪ್ರೇಮ ಮೋಸ ಕಡೆಗೆ ಕೊಲೆಯಲ್ಲಿ ಅಂತ್ಯ.ಇದೆಲ್ಲ ಸಾಮಾನ್ಯ ಆಗಿಬಿಟ್ಟಿದೆ.
ಇಂತಹ ಪ್ರಕರಣಗಳು ಆಗಿಂದ್ದಾಗ್ಗೆ ಮಾಧ್ಯಮಗಳಲ್ಲಿ ಬರುತ್ತಿದ್ದರೂ ಜನ ಎಚ್ಚೆತುಕೊಳ್ಳದೆ ತಾವಾಗಿಯೇ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.ಇದಕ್ಕೆ ಏನು ಹೇಳಬೇಕೊ ತಿಳಿಯದಾಗಿದೆ.
ಇಂತಹದ್ದೇ ಮತ್ತೊಂದು ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ವಿವಾಹಿತ ಮಹಿಳೆಯನ್ನು ಇನ್ಸ್ಟಾಗ್ರಾಂ ನಲ್ಲಿ ಪರಿಚಯಿಸಿಕೊಂಡ ಯುವಕ ಪ್ರೀತಿಯ ನಾಟಕವಾಡಿ ಆಕೆಯೊಂದಿಗೆ ಚೆಕ್ಕಂದವಾಡಿ ಹತ್ತೇ ದಿನಗಳಲ್ಲಿ ಅವಳನ್ನು ಕೊಂದು ದೇಹವನ್ನು ತನ್ನದೇ ಜಮೀನಿನಲ್ಲೇ ಬಚ್ಚಿಟ್ಟ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಕರೋಟಿ ಗ್ರಾಮದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ ಕೊಲೆ ಆದ ವಿವಾಹಿತ ಮಹಿಳೆ.
ಕರೋಟಿ ಗ್ರಾಮದ ಪುನೀತ್ ಕೊಲೆ ಮಾಡಿ ಆಕೆಯ ದೇಹವನ್ನು ತನ್ನ ಜಮೀನಿನಲ್ಲೇ ಬಚ್ಚಿಟ್ಟಿದ್ದ.
ಇನ್ಸ್ಟಾಗ್ರಾಂ ನಲ್ಲಿ ಪ್ರೀತಿಯನ್ನ ಪುನೀತ್ ಪರಿಚಯ ಮಾಡಿಕೊಂಡು ಪ್ರೀತಿ-ಪ್ರೇಮ ಶುರು ಮಾಡಿದ್ದಾನೆ.
ಬೆಳಿಗ್ಗೆ ಮೈಸೂರು, ಮಂಡ್ಯದಲ್ಲಿ ಜಾಲಿ ರೈಡ್ ಮಾಡಿದ್ದಾರೆ.ಸಂಜೆ ಪ್ರಿಯತಮೆ ಮೈಮೇಲಿದ್ದ ಚಿನ್ನಾಭರಣ ದೋಚಿ ಬರ್ಬರ ಹತ್ಯೆ ಮಾಡಿದ್ದಾನೆ.
ಗಂಡ, ಮಕ್ಕಳಿದ್ದರೂ ಪುನೀತ್ ಜೊತೆ ಪ್ರೀತಿ ಲವ್ ನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾಳೆ.
ಭಾನುವಾರ ಮೈಸೂರಿಗೆ ಒಟ್ಟಿಗೆ ಇಬ್ಬರೂ ಕಾರಿನಲ್ಲಿ ತೆರಳಿದ್ದರು. ಮೈಸೂರು, ಮಂಡ್ಯ ಪ್ರವಾಸಿ ಸ್ಥಳಗಳಲ್ಲಿ ಸುತ್ತಾಡಿದ್ದಾರೆ.
ನಂತರ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶಕ್ಕೆ ಬಂದಿದ್ದಾರೆ.ಅದೇನಾಯಿತೊ ಇಬ್ಬರ ನಡುವೆ ಜಗಳ ಆಗಿದೆ.
ಆಗ ಪುನೀತ್ ಅಲ್ಲೆ ಕೊಲೆಗೈದು ಚಿನ್ನಾಭರಣ ದೋಚಿ ಬಳಿಕ ಪ್ರೀತಿಯ ದೇಹ ತಂದು ಕರೋಟಿ ಗ್ರಾಮದ ತನ್ನ ಜಮೀನಿನಲ್ಲಿ ಬಚ್ಚಿಟ್ಟಿದ್ದಾನೆ.
ಪ್ರೀತಿಯ ಪೋನ್ ಗೆ ಬಂದ ಕಾಲ್ ನಿಂದ ಪುನೀತ್ ಸಿಕ್ಕಿಬಿದ್ದಿದ್ದಾನೆ.
ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈಗ ಕಂಬಿ ಎಣಿಸುತ್ತಿದ್ದಾನೆ.