ಕೊಳ್ಳೇಗಾಲ: ಮನೆಯಲ್ಲಿದ್ದ ಗೃಹಿಣಿ ದಿಡೀರ್ ನಾಪತ್ತೆಯಾಗಿರುವ ಘಟನೆ ತಾಲ್ಲೂಕಿನ ಮೂಳ್ಳೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಲೇ. ಮಹೇಶ್ ಎಂಬುವವರ ಪತ್ನಿ ಪಾರ್ವತಿ ಎಂಬಾಕೆ ನಾಪತ್ತೆಯಾಗಿರುವ ಗೃಹಿಣಿ.
ತಾಲ್ಲೂಕಿನ ಇಕ್ಕಡಹಳ್ಳಿ ಗ್ರಾಮದ ಪಾರ್ವತಿ ಮೂಳ್ಳೂರು ಗ್ರಾಮದ ಮಹೇಶ್ ಎಂಬುವವರನ್ನು ಕಳೆದ 18 ವರ್ಷಗಳ ಹಿಂದೆ ಮದುವೆಯಾಗಿದ್ದು ಮೂವರು ಹೆಣ್ಣು ಮಕ್ಕಳಿದ್ದಾರೆ.
ಈ ಹಿಂದೆ ಕೂಡಾ ಇದೇ ರೀತಿ ನಾಲ್ಕೈದು ಬಾರಿ ನಾಪತ್ತೆಯಾಗಿದ್ದಳು. ಠಾಣೆಯಲ್ಲಿ ದೂರು ದಾಖಲಾಗುತ್ತಿತ್ತು.ಆಗ ಪೊಲೀಸರು ಪತ್ತೆ ಹಚ್ಚಿ ಕರೆತಂದಿದ್ದರು.
ಈಕೆಯ ಪತಿ 2 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಪತಿ ಮಹೇಶ್ ಕಾಲವಾದ ನಂತರ ತವರು ಮನೆ ಸೇರಿದ್ದ ಪಾರ್ವತಿಯನ್ನು ಆಕೆಯ ಪೋಷಕರು ಗ್ರಾಮದ ಯಜಮಾನರು, ಮುಖಂಡರ ಸಮ್ಮುಖದಲ್ಲಿ ಮುಳ್ಳೂರಿನಲ್ಲಿರುವ ಗಂಡನ ಮನೆಗೆ ಕರೆತಂದು ಬಿಟ್ಟಿದ್ದರು.
ಪಾರ್ವತಿ ಕಳೆದ 3 – 4 ದಿನಗಳ ಹಿಂದೆ ಕಾರಣವಿಲ್ಲದೇ ಮನೆಬಿಟ್ಟು ಹೊರಗೆ ಹೋಗಿ ಮರಳಿ ಮನೆಗೆ ಬಾರದ ಹಿನ್ನೆಲೆ ಕುಟುಂಬದವರು ಆತಂಕಕ್ಕೊಳಗಾಗಿದ್ದಾರೆ.
ಸೊಸೆ ಪಾರ್ವತಿಯನ್ನು ಮನೆಯ ಸುತ್ತಮುತ್ತ ಹಾಗೂ ಬಂಧು- ಬಳಗದ ಮನೆಗಳಲ್ಲಿಯೂ ಹುಡುಕಿದರೂ ಸುಳಿವು ಸಿಗದ ಕಾರಣ, ಆಕೆಯ ಅತ್ತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ನಾಪತ್ತೆಯಾಗಿರುವ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಪ್ರಾರಂಭಿಸಿದ್ದಾರೆ.
ಗೃಹಿಣಿಯ ಪತ್ತೆಗೆ ಸಾರ್ವಜನಿಕರ ಸಹಕಾರದ ಅಗತ್ಯವಿದ್ದು,ಈಕೆ ಯಾರಿಗಾದರೂ ಕಂಡುಬಂದಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಕೊಳ್ಳೇಗಾಲ ತಾ.ಮುಳ್ಳೂರಿನಲ್ಲಿ ಗೃಹಿಣಿ ನಾಪತ್ತೆ