ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿದೀವಿ ಅಂತ ದಿಮಾಕೊ ಏನೊ ಕೆಲ ಮಹಿಳೆಯರು ಚಾಲಕರಿಗೆ ಚಪ್ಪಲಿಯಿಂದ ಹೊಡೆದು ಅವಮಾನಿಸುವ ಪ್ರಕರಣಗಳು ಹೆಚ್ಚಾಗಿವೆ.
ಮೊನ್ನೆ,ಮೊನ್ನೆಯಷ್ಟೇ ಮಹಿಳೆಯೊಬ್ಬರು ಆಟೋ ಡ್ರೈವರ್ ಗೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ್ದಳು.ನಂತರ ತಪ್ಪಾಯಿತು ,ಟ್ರಸ್ಟ್ ನಿಂದ ಹಾಗೆ ಮಾಡಿಬಿಟ್ಟೆ ಕ್ಷಮಿಸಿ ಎಂದು ಆಟೋಚಾಲಕನ ಕಾಲಿಗೆ ಬಿದ್ದಳು.ಈ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಇನ್ನೊಂದು ಚಪ್ಪಲಿ ಹೊಡೆತ ಪ್ರಕರಣ ನಡೆದಿದೆ.
ಈ ಬಾರಿ ಆಟೋ ಚಾಲಕ ಅಲ್ಲ ಬಿಎಂಟಿಸಿ ಡ್ರೈವರ್ ಮೇಲೆ ಮಹಿಳೆ ಚಪ್ಪಲಿಯಿಂದ ಹೊಡೆದಿದ್ದಾಳೆ.
ತಾನು ಹೇಳಿದ ಜಾಗದಲ್ಲಿ ಬಸ್ ನಿಲ್ಲಿಸಿಲ್ಲ ಎಂದು ಕೋಪಗೊಂಡ ಮಹಿಳೆ ಬಿಎಂಟಿಸಿ ಬಸ್ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿ ಅವಮಾನಿಸಿದ್ದಾಳೆ.
ಈ ಘಟನೆ ಬೆಂಗಳೂರಿನ ಸರ್ಜಾಪುರ ರಸ್ತೆಯ ಕೈಕೊಂಡರಹಳ್ಳಿಯಲ್ಲಿ ಬಳಿ ನಡೆದಿದೆ.
ಅತರ್ ಹುಸೇನ್(42) ಎಂಬವರಿಗೆ ಕಾವ್ಯಾ(30) ಎಂಬಾಕೆ ಹಲ್ಲೆ ಮಾಡಿದ್ದಾಳೆ.ಈಕೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾಳಂತೆ.ಅದಕ್ಕೇ ಇಸ್ಟೋಂದು ಧಿಮಾಕು ಅಂತ ಕಾಣ್ಸುತ್ತೆ.
ಕೈಕೊಂಡರಹಳ್ಳಿ ಬಸ್ ನಿಲ್ದಾಣದಲ್ಲಿ ಟಿಕೆಟ್ ತೆಗೆದುಕೊಂಡ ಈಕೆ ತನ್ನ ಕಚೇರಿ ಬಳಿ ಬಸ್ ನಿಲ್ಲಿಸುವಂತೆ ಚಾಲಕನಿಗೆ ಒತ್ತಾಯಿಸಿದ್ದಾಳೆ. ಆದರೆ, ಸಂಚಾರ ದಟ್ಟಣೆ ಮತ್ತು ನಿಯಮಗಳ ಕಾರಣದಿಂದ ಬಸ್ ಚಾಲಕ ಬಸ್ ನಿಲ್ಲಿಸಿಲ್ಲ.
ನಂತರ ಆ ಮಹಿಳೆ ಹೊಟ್ಟೆನೋವೆಂದು ಕಿರುಚಿಕೊಂಡು ಬಸ್ ನಿಲ್ಲಿಸುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆ ಸ್ಪಂದಿಸಿದ ಚಾಲಕ, ಬಲಕ್ಕೆ ತಿರುವು ತೆಗೆದುಕೊಂಡು ಬಸ್ ನಿಲ್ಲಿಸಿದ್ದಾರೆ.
ಆಕೆ ಸುಮ್ಮನೆ ಇಳಿದು ಹೋಗುವುದು ಬಿಟ್ಟು ತನ್ನ ಚಪ್ಪಲಿಯನ್ನು ತೆಗೆದುಕೊಂಡು ಚಾಲಕನಿಗೆ ಹಲ್ಲೆ ನಡೆಸಿದ್ದಾಳೆ.
ಬಸ್ ಚಾಲಕ ನಂತರ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ.
