ಮಹಿಳಾ ಉದ್ಯೋಗಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಮಹಿಳೆ!

Spread the love

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಪುಂಡರು,ಕಿಡಿಗೇಡಿಗಳು ಮಾತ್ರ ಪೋಸ್ಟ್ ಹಾಕ್ತಾರೆ ಅಂದುಕೊಂಡಿದ್ದರೆ ಅದು ತಪ್ಪು,ಮಹಿಳೆಯರು ಕೂಡಾ ಹೀಗೆ ಮಾಡಿದ ಉದಾಹರಣೆ ಇದೆ.

ಮಹಿಳೆಗೆ ಮಹಿಳೆಯೇ ಶತೃ ಎಂಬುದು ಈ ಪ್ರಕರಣದಿಂದ ಗೊತ್ತಾಗುತ್ತದೆ.

ಖಾಸಗಿ ಕಂಪನಿ ಉದ್ಯೋಗಿ ಬಗ್ಗೆ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಮೇಲೆ ಈಗ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಾಪಿನ್ ಕಂಪನಿಗೆ ಸೇರಿದ ಸಾಮಾಜಿಕ ಜಾಲತಾಣದಲ್ಲಿ ಮೃಣಾಲಿನಿ ಮನೋಹರ್ ಎಂಬಾಕೆ ಪೋಸ್ಟ್ ಮಾಡಿದ್ದಾರೆಂದು ನೊಂದ ಉದ್ಯೋಗಿ ದೂರು ದಾಖಲಿಸಿದ್ದಾರೆ.

ವ್ಯಕ್ತಿಯೊಬ್ಬರ ಜೊತೆ ಸಂಬಂಧ ಇದೆ ಎಂದು ಸುಳ್ಳು ಮಾಹಿತಿ ಹಾಕಿದ್ದಾರೆ.ಫೇಸ್ ಬುಕ್ ಮೆಸೆಂಜರ್ ನಲ್ಲಿ ಕ್ಕೈಂಟ್ಸ್ ಗಳನ್ನ ಗುರಿಯಾಗಿಸಿಕೊಂಡು ನನ್ನ ವಿರುದ್ದ ಅಶ್ಲೀಲವಾಗಿ ಕೆಟ್ಟಪದಗಳನ್ನ ಬಳಸಿ ತೇಜೋವಧೆ ಮಾಡಿದ್ದಾರೆಂದು ಉದ್ಯೋಗಿ ಆರೋಪಿಸಿದ್ದಾರೆ.

ನನ್ನ ಬಗ್ಗೆ ಪ್ರಾಸ್ಟಿಟ್ಯೂಟ್ ಎಂದು ಮಹಿಳೆ ಉಲ್ಲೇಖಿಸಿ ತೇಜೋವಧೆ ಮಾಡಿದ್ದಾರೆಂದು ದೂರಿದ್ದಾರೆ.

ಜತೆಗೆ ನನ್ನ ಅಜ್ಜಿಯ ಬಗ್ಗೆಯೂ ತಪ್ಪಾಗಿ ಮಾಹಿತಿ ನೀಡಿದ್ದಾರೆ.ನನ್ನ ಬಗ್ಗೆ ಅಸಭ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಮೃಣಾಲಿನಿ ಮನೋಹರ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೊಂದ ಮಹಿಳಾ ಉದ್ಯೋಗಿ ಪ್ರಕರಣ ದಾಖಲಿಸಿದ್ದಾರೆ.