ಮೈಸೂರು: ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಮೈಸೂರು ಜಿಲ್ಲಾ ಘಟಕದಿಂದ ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ಸಂಸ್ಥಾಪಕ ಶ್ರೀ ದಿ.ಕೆ.ಹೆಚ್.ರಾಮಯ್ಯರವರ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡು ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ, ಸಾಧಕರನ್ನು ಸನ್ಮಾನಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಅವರು, ಕೆ.ಎಚ್.ರಾಮಯ್ಯ ಕೇವಲ ಒಕ್ಕಲಿಗರಿಗೆ ಸೀಮಿತರಾಗಿಲ್ಲ, ಹಿಂದುಳಿದ ವರ್ಗದ ಏಳಿಗೆಗೂ ಶ್ರಮಿಸಿದ್ದರು ಎಂದು ಹೇಳಿದರು.
ಸಮಾಜದ ಅಭಿವೃದ್ಧಿಗೆ ಸಹಕಾರ ಇಲಾಖೆ ತೆರೆಯಲು ಕಾರಣರಾಗಿದ್ದಾರೆ,ಅವರು ಒಕ್ಕಲಿಗರ ಸಂಘ ಸ್ಥಾಪಿಸಿದಾಗ ನಮ್ಮ ರಾಜ್ಯದ ಅಂದಿನ ಬಜೆಟ್ ನಷ್ಟು ಹಣವನ್ನು ಸಂಘದಲ್ಲಿ ಇಟ್ಟು ದಾಖಲೆ ಬರೆದಿದ್ದಾರೆ. ಪ್ರತಿಯೊಬ್ಬರೂ ಇಂತಹ ಮಹನೀಯರ ಬಗ್ಗೆ ಓದಿ ತಿಳಿಯಬೇಕು. ಜೀವನದಲ್ಲಿ ಇಂತಹವರ ಹೆಸರಿನಲ್ಲಿ ಸನ್ಮಾನಿಸುವುದು ಶ್ಲಾಘನೀಯ ಎಂದು ತಿಳಿಸಿದರು.
ಮಾಜಿ ಸಂಸದ ಪ್ರತಾಪಸಿಂಹ ಮಾತನಾಡಿ, ಇಂದು ಚುಂಚನಗಿರಿ ಕ್ಷೇತ್ರ ಬೆಳೆಯಲು ಕೆ.ಎಚ್.ರಾಮಯ್ಯನವ ರಂತಹ ಹಿರಿಯ ಜೀವಗಳು ಅಡಿಪಾಯ ಹಾಕಿಕೊಟ್ಟಿದ್ದು, ಅದರೊಂದಿಗೆ ನಾವು ಮುನ್ನಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಮೈಸೂರು ಸಂಸದನಾಗಿ ಮಾಡಿ,ನನ್ನನ್ನು ಎಲ್ಲರೂ ಪ್ರೀತಿಯಿಂದ ಅವಕಾಶ ಕೊಟ್ಟಿದ್ದಿರಿ. 10 ವರ್ಷದಲ್ಲಿ ಶಕ್ತಿ ಮೀರಿ ಮೈಸೂರಿಗೆ ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸಿದ್ದೀನಿ, ರಸ್ತೆ, ನೀರು ಹೀಗೆ ಅನೇಕ ಕೆಲಸ ಮಾಡಿದ್ದೇನೆ. ಟಿಕೆಟ್ ಸಿಗದಿದ್ದಾಗ ನಿಮ್ಮ ಪ್ರೀತಿ ಮತ್ತಷ್ಟು ಹೆಚ್ಚಾಗಿ ಇವನಿಗೆ ಅನ್ಯಾಯ ಆಯಿತು ಎಂದು ಮರುಗಿದವರನ್ನೂ ನೋಡಿದ್ದೇನೆ ಹೇಳಿದರು.
ಈ ಪ್ರೀತಿ ಮುಂದಿನ ದಿನಗಳಲ್ಲಿಯೂ ಇರಲಿ. ಮೈಸೂರಿನಲ್ಲೇ ಇರುತ್ತೇನೆ. ಮಲೆನಾಡು ನನ್ನ ಜನ್ಮ ಭೂಮಿಯಾದರೂ ಮೈಸೂರೇ ನನ್ನ ಕರ್ಮಭೂಮಿ. ನನ್ನ ರೂದ್ರಭೂಮಿಯೂ ಮೈಸೂರೇ ಆಗಿದೆ. ಮಲೆನಾಡಿನಲ್ಲಿ ಹುಟ್ಟಿದ ಕುವೆಂಪು ಅವರು ಈ ಊರಿನಲ್ಲೇ ಹುಟ್ಟಿ ಇಲ್ಲೇ ಸೈ ಎನಿಸಿಕೊಂಡರು. ಮಲೆನಾಡಲ್ಲಿ ಹುಟ್ಟಿದ ಅಂಕಣ ಬರಹಗಾರರು ಹ.ಮ.ನಾಯಕ್ ಅವರು ನಮ್ಮವರು ಎಂಬುದು ಸಾಕಷ್ಟು ಮಂದಿಗೆ ಗೊತ್ತಿಲ್ಲ. ಜತೆಗೆ ಹಾಸನದಿಂದ ಬಂದ ಎಸ್.ಎಲ್.ಬೈರಪ್ಪ ಅವರು ಇಲ್ಲೇ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಹೀಗೆ ಎಲ್ಲರನ್ನೂ ಸ್ವೀಕರಿಸುವ, ಪ್ರೀತಿಸಿ ಪ್ರೋತ್ಸಾಹಿಸುವ ಗುಣ ಮೈಸೂರಿಗೆ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಕೆಲಸ ಮಾಡೋಣ, ಸದಾ ನಾನು ನಿಮ್ಮೊಟ್ಟಿಗೆ ಇರುತ್ತೇನೆ. ಮತ್ತಷ್ಟು ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜಸೇವಕ ಕೆ.ಎನ್. ಧನ್ಯಕುಮಾರ್, ವಿಜಯನಗರ ಐಶ್ವರ್ಯ ಆಸ್ಪತ್ರೆ ಡಾ.ಲಕ್ಷ್ಮೀಗೌಡ, ನಟ ಹಾಗೂ ಕಾವೇರಿ ಕ್ರಿಯಾಸಮಿತಿ ಅಧ್ಯಕ್ಷ ಎಸ್. ಜಯಪ್ರಕಾಶ್ (ಜೆ.ಪಿ), ಮಹಾರಾಣಿ ಕಲಾ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಸಿ.ಹೆಚ್.ಪ್ರಕಾಶ್, ಪಂಚವಟಿ ಹೋಟೆಲ್ ಪಾಲುದಾರ ಪಾಂಡುರಂಗ ಸತೀಶ್ ಗೌಡ,
ಶ್ರೀ ಲಕ್ಷ್ಮಿ ಚಾರಿಟೆಬಲ್ ಟ್ರಸ್ಟ್ ರಾಜ್ಯಾಧ್ಯಕ್ಷೆ ಶೋಭರಾಣಿ ಗೌಡ, ಉದಯಕಾಲ ದಿನಪತ್ರಿಕೆ ಜಿಲ್ಲಾ ವರದಿಗಾರ ಜೆ. ರವಿಚಂದ್ರ ಹಂಚ್ಯಾ ಅವರಿಗೆ ಕೆ.ಹೆಚ್.ರಾಮಯ್ಯ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ವೇಳೆ ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಅಖಿಕ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ.ಗಂಗಾಧರ್, ಜಿಲ್ಲಾ ಗೌರವಾಧ್ಯಕ್ಷ ಡಾ. ಸಿ ವೈ ಶಿವೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ.ಶ್ರೀಧರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜೇಗೌಡ,
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮಹಿಳ ಅಧ್ಯಕ್ಷೆ ಲತಾ ರಂಗನಾಥ್, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ,
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವನಜಾಕ್ಷಿ, ಲಕ್ಷ್ಮಿ, ಮಂಜುಳಾ, ಭಾಗ್ಯಮ್ಮ, ನೇಹಾ, ಕೃಷ್ಣೇಗೌಡ, ಯಶ್ವಂತ್, ಲಿಂಗಪ್ಪ, ನರಸಿಂಹೇ ಗೌಡ, ಹನುಮಂತಯ್ಯ, ಸಿದ್ದೇಗೌಡ, ರಾಮಣ್ಣ, ದರ್ಶನ್ ಗೌಡ, ವಿಷ್ಣು ಮತ್ತಿತರರು ಉಪಸ್ಥಿತರಿದ್ದರು.