ಮೈಸೂರು: ಮೈಸೂರಿನ ಕುವೆಂಪು ನಗರದಲ್ಲಿ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಅಧ್ಯಕ್ಷೆ ಸವಿತ ಗೌಡ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಮೈಸೂರು ದಿ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಪ್ರಮೀಳಾ,
ಮೈಸೂರು ಸಹಕಾರ ನಿಯಮಿತ ಮಹಿಳಾ ಬ್ಯಾಂಕ್ ನಿರ್ದೇಶಕರಾದ ಸುಶೀಲ ನಂಜಪ್ಪ,
ರಾಜೇಶ್ವರಿ ನಾಗರಾಜ ಅವರು ಸಂಘದ ಎಲ್ಲ ಸದಸ್ಯರಿಗೆ ಪರಿಸರದ ಸಂರಕ್ಷಣೆಯ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಜಾತಿಯ ಗಿಡಗಳನ್ನು ನೀಡಿದರು.
ಮನೆಗೂಂದು ಮರ ನೆಟ್ಟು ದೇಶಕ್ಕೆ ವರವಾಗುವಂತೆ ಗಿಡ ಬೆಳೆಸಿ ಧರೆಯನ್ನು ಗಟ್ಟಿಗೂಳಿಸೋಣ ಎಂದು ಅಧ್ಯಕ್ಷರಾದ ಸವಿತ ಗೌಡ ಸಲಹೆ ನೀಡಿದರು.
ಪದಾಧಿಕಾರಿಗಳಾದ ಲತಾ ರಮೇಶ, ಲತಾ ಮಹೇಶ, ಕನ್ಯಾ, ಲಕ್ಷೀ ಚಿಕ್ಕಣ್ಣ,ಲೀಲಾ ಗಂಗಾಧರ,ಲೀಲಾವತಿ, ಲಕ್ಷೀ ಕೆ,ಆರ್, ಭಾರತಿ ಉಪಸ್ಥಿತರಿದ್ದರು.