ಮೈಸೂರು: ಮಹಿಳೆಯರು ರಾಜಕೀಯಕ್ಕೆ ಬರಬೇಕು,ಹೆಚ್ಚು ಮಂದಿ ವಿಧಾನಸಭೆ ಪ್ರವೇಶಿಸಲಿ ಎಂದು ಶಾಸಕ ಕೆ.ಹರೀಶ್ ಗೌಡ ಸಲಹೆ ನೀಡಿದರು.
ಮೈಸೂರಿನ ವಿದ್ಯಾವರ್ಧಕ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯ ಒಕ್ಕಲಿಗರ ಮಹಿಳಾ ಸಂಘದ ಜಿಲ್ಲಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಸಂಘಟಿತರಾಗುವುದು ಉತ್ತಮ ಬೆಳೆವಣಿಗೆ ಆಗಿದೆ. ಈ ದಿಸೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಮಹಿಳೆಯರ ಕ್ಲಬ್ ತೆರೆಯಲು ತಮ್ಮ ಅಗತ್ಯ ಬೆಂಬಲ ನೀಡಲು ಸಿದ್ದನಿದ್ದೇನೆ ಎಂದು ಭರವಸೆ ನೀಡಿದರು.
ನನ್ನ ಕ್ಷೇತ್ರದ ವ್ಯಾಪ್ತಿಯ ಯಾವುದೇ ಅಭಿವೃದ್ಧಿ ವಿಚಾರವಾಗಿ ಯಾವಗ ಬಂದು ಎನೇ ಕೇಳಿದರೂ ಅದನ್ನು ನೇರವೇರಿಸಲು ಬದ್ಧನಿದ್ದೇನೆಂದು ಎಲ್ಲ ಹರೀಶ್ ಗೌಡ ತಿಳಿಸಿದರು.
ಲಜಿಲ್ಲಾ ಘಟಕದ ಲೋಗೊ ಬಿಡುಗಡೆ ಮಾಡಿದ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತೆ ಡಾ.ಬಿ.ಆರ್.ಮಮತಾ ಮಾತನಾಡಿ, ನಾನು ಹಿಂದೆ ರಾಮನಗರ ಜಿಲ್ಲಾಧಿಕಾರಿಯಾಗಿದ್ದಾಗ ಮಹಿಳೆಯರನ್ನ ಸಂಘಟಿಸಿ ಗುಡಿ ಕೈಗಾರಿಕೆ ನಡೆಸುವಂತೆ ಮಾಡಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಒಕ್ಕಲಿಗ ಮಹಿಳಾ ಘಟಕ ತೆರೆದಿದ್ದೀರಿ,ಹೀಗೆ ರಾಜ್ಯಾದ್ಯಂತ ಘಟಕಗಳು ತೆರಯಬೇಕು. ಇಲ್ಲಿಯೂ ಮಹಿಳೆಯರು ಒಗ್ಗೂಡಿ ಗುಡಿ ಕೈಗಾರಿಕೆ ಪ್ರಾರಂಭಿಸುವ ಮೂಲಕ ಸ್ವಾವಲಂಬನೆಯ ಹಾದಿಯಲ್ಲಿ ಸಾಗಬೇಕಿದೆ ಎಂದು ಕರೆ ನೀಡಿದರು.
ಕೈಗಾರಿಕೆಗಳ ಪ್ರಾರಂಭಕ್ಕೆ ಕ್ಲಬ್ ಒಂದನ್ನು ರಚಿಸಿಕೊಂಡು ಅಭಿವೃದ್ಧಿ ಸಾಧಿಸಿ. ಅದಕ್ಕೆ ಸೂಕ್ತ ನೆರವು, ಸಹಕಾರ ನೀಡುತ್ತೇನೆ ಎಂದು ಮಮತಾ ಆಶ್ವಾಸನೆ ನೀಡಿದರು.
ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕ ಎಲ್.ನಾಗೇಂದ್ರ ಶುಭಕೋರಿದರು.
ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಹಿರಿಯ ವಕೀಲ ಎಚ್.ಎ.ವೆಂಕಟೇಶ್, ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಪ್ರೇಮಾಶಂಕರೇಗೌಡ, ವಕೀಲರ ಸಂಘದ ಅಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಸುದೀರ್, ಸುಯೋಗ್ ಆಸ್ಪತ್ರೆ ಮುಖ್ಯಸ್ಥ ಡಾ.ಎಸ್.ಪಿ.ಯೋಗಣ್ಣ, ಡಾ.ವೆಂಕಟಪ್ಪ, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕಿ ರಾಜ್ಯ ಗೌರವಾಧ್ಯಕ್ಷೆ
ಸುಶೀಲ ನಂಜಪ್ಪ, ರಾಜ್ಯಾಧ್ಯಕ್ಷೆ ಗೀತಾ, ರಾಜ್ಯ ಮಹಿಳಾ ನೌಕರರ ಸಂಘದ ಕಾರ್ಯದರ್ಶಿ ಡಾ.ಶೈಲಜಾ, ಖಜಾಂಚಿ ತನುಜಾ, ಜಿಲ್ಲಾಧ್ಯಕ್ಷೆ ಮೀನಾ, ಕಾರ್ಯದರ್ಶಿ ಭಾಗ್ಯಮ್ಮ, ಖಜಾಂಚಿ ನಾಗವೇಣಿ ಮತ್ತಿತರರು ಉಪಸ್ಥಿತರಿದ್ದರು.
