ಮುಂಬೈ: ಮಹಾರಾಷ್ಟ್ರದ ಪನ್ವೇಲ್‌ನಲ್ಲಿರುವ ವಸತಿ ಸಮುಚ್ಚಯವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಎಂಟು ವರ್ಷದ ಮಗಳನ್ನು 29ನೇ ಮಹಡಿಯ ಫ್ಲಾಟ್‌ನಿಂದ ತಳ್ಳಿ ನಂತರ ತಾನೂ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಘಟನೆ ಬುಧವಾರ ಪಲಸ್ಪೆಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಗಳನ್ನು ತಳ್ಳಿದ 37 ವರ್ಷದ ಮೈಥಿಲಿ ದುವಾ ಎಂಬ ಮಹಿಳೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು ಎಂದು ವರದಿಯಾಗಿದೆ. ಮೈಥಿಲಿ ತನ್ನ ಮಗುವನ್ನು ತಳ್ಳಿ ನಂತರ ತಾನೂ ಜಿಗಿದಿದ್ದಾಳೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪನ್ವೇಲ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.