ಎಚ್.ಡಿ.ಕೋಟೆಯಲ್ಲಿ ಕಾಡಾನೆಗಳ ಕಾಟ

ಎಚ್.ಡಿ.ಕೋಟೆ: ಕಳೆದ ಕೆಲ ದಿನಗಳಿಂದ ಹುಲಿ ದಾಳಿಯಿಂದ ಕಂಗೆಟ್ಟಿದ್ದ ಎಚ್.ಡಿ.ಕೋಟೆ ತಾಲ್ಲೂಕಿನ ಜನತೆ ಈಗ ಕಾಡಾನೆಗಳ ಕಾಟದಿಂದ‌ ಬೇಸತ್ತು ಹೋಗಿದ್ದಾರೆ.

ತಾಲ್ಲೂಕಿನ ಬೂದನೂರು ಹಾಡಿ ಬೋಚಿಕಟ್ಟೆ ರಸ್ತೆಯಲ್ಲಿ ಕಾಡಾನೆ ದಾಂಧಲೆ ನಡೆಸಿದ್ದು, ಜಮೀನಿಗೆ ತೆರಳುತ್ತಿದ್ದ ರೈತರ ಮೇಲೆ ದಾಳಿ ಮಾಡಲು ಯತ್ನಿಸಿದೆ.ಆದರೆ ರೈತರು ಕ್ಷಣಾರ್ಧದಲ್ಲಿ ದಾಳಿಯಿಂದ ಪಾರಾಗಿದ್ದಾರೆ.

ಅಷ್ಟರಲ್ಲಿ ರೊಚ್ಚಿಗೆದ್ದ ಕಾಡಾನೆಯು ಮನೆ ಬಳಿ ಕಟ್ಟಿ ಹಾಕಿದ್ದ ಮೇಕೆ ಮೇಲೆ ದಾಳಿ ಮಾಡಿ ಕಾಲನ್ನು ಮುರಿದು ಹಾಕಿದೆ.

ಈ ಭಾಗದಲ್ಲಿ ಕಳೆದ ತಿಂಗಳು ಹುಲಿ ಕಾಟದಿಂದ ಜನರು ಆತಂಕಗೊಂಡಿದ್ದರು. ಈಗ ಆನೆಗಳ ಕಾಟ‌ ಪ್ರಾರಂಭವಾಗಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.