ಪತಿಗೆ ಯಾಮಾರಿಸಿ ಮನೆ ದಾಖಲೆ ಪತ್ರ,ಚಿನ್ನಾಭರಣ ದೋಚಿ ಪ್ರಿಯಕರನ ಜತೆ ಪತ್ನಿ ಎಸ್ಕೇಪ್

Spread the love

ಮೈಸೂರು: ಇತ್ತೀಚಿನ ದಿನಗಳಲ್ಲಿ ವಿವಾಹಿತ ಮಹಿಳೆಯರೇ ಹಚ್ಚು ಸುದ್ದಿಗೆ ಗ್ರಾಸವಾಗುತ್ತಿದ್ದಾರೆ.ಇದಕ್ಕೆ ಸಾಂಸ್ಕೃತಿಕ ನಗರಿಯಲ್ಲಿ ನಡೆದ ಘಟನೆ ಸೇರ್ಪಡೆಯಾಗಿದೆ.

ಅಂಗಡಿ ಮಾಲೀಕನ ಜೊತೆ ಅಕ್ರಮ ಸಂಬಂಧ ಬೆಳೆಸಿ‌ದ ಮಹಿಳೆ ಪತಿಗೆ ಬೆದರಿಕೆ ಹಾಕಿ ಮನೆ ದಾಖಲೆ ಪತ್ರ ಹಾಗೂ ಚಿನ್ನಾಭರಣಗಳ ಸಮೇತ ಪರಾರಿಯಾಗಿರುವ ಘಟನೆ ನಗರದ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಗರಡಿಕೇರಿಯಲ್ಲಿ ನಡೆದಿದೆ.

ತನಗೆ ಮೋಸ ಮಾಡಿದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಹಿಡಿದು ಕಾನೂನು ರೀತಿ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕೆಂದು ಪತಿ ಲಷ್ಕರ್ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

ಪತಿ ಜಸ್ವಂತ್ ಸೋನಿ ಅವರು ಪತ್ನಿ ಸುಶೀಲಾ,ಪ್ರಿಯಕರ ರಾಜೇಶ್ ಕುಮಾರ್ ಸೋನಿ ಹಾಗೂ ಸಹಕರಿಸಿದ ರಾಕೇಶ್ ಸೋನಿ ವಿರುದ್ದ ದೂರು ದಾಖಲಿಸಿದ್ದಾರೆ.

14 ವರ್ಷಗಳ ಹಿಂದೆ ಜಸ್ವಂತ್ ಸೋನಿ ಹಾಗೂ ಸುಶೀಲ ವಿವಾಹವಾಗಿದ್ದು,ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಜಸ್ವಂತ್ ಸೋನಿ ಅವರು ತಮ್ಮ ಅಣ್ಣ ರಾಜಕುಮಾರ್ ಅವರ ಅಂಗಡಿಯಲ್ಲಿ ಗೋಲ್ಡ್ ಸ್ಮಿತ್ ಆಗಿ ಕೆಲಸ ಮಾಡುತ್ತಿದ್ದರು.
ಅಂಗಡಿಗೆ ರಾಜೇಶ್ ಕುಮಾರ್ ಭೇಟಿ ಕೊಡುತ್ತಿದ್ದರು.ನಂತರ ಜಸ್ವಂತ್ ಸೋನಿ ಅವರು ರಾಜೇಶ್ ಕುಮಾರ್ ಸೋನಿ ಯವರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು.

ಜಸ್ವಂತ್ ಸೋನಿ ಅಂಗಡಿಗೆ ಕೆಲಸಕ್ಕೆ ಬಂದಾಗ ರಾಜೇಶ್ ಕುಮಾರ್ ಸೋನಿ ಅವರು ಜಸ್ವಂತ್ ಮನೆಗೆ ಹೋಗುತ್ತಿದ್ದರು.

ಹಾಗೆಯೇ ಜಸ್ವಂತ್ ಪತ್ನಿ ಜತೆ ಸಲುಗೆ ಬೆಳೆದು ಪ್ರೀತಿ,ಅಕ್ರಮ ಸಂಬಂಧ ಶುರುವಾಗಿದೆ. ಈ ಅಕ್ರಮ ಸಂಬಂಧ ವಿಚಾರ ಪತಿಗೆ ಗೊತ್ತಾಗಿದೆ.

ಅಕ್ರಮ ಸಂಬಂಧದ ಬಗ್ಗೆ ತಕರಾರು ಮಾಡಿದ್ರೆ ಚಿನ್ನ ಕಳುವು ಆರೋಪ ಹೊರೆಸಿ ಜೈಲಿಗೆ ಕಳಿಸುವುದಾಗಿ ಪ್ರೇಮಿಗಳು ಬೆದರಿಕೆ ಹಾಕಿದ್ದಾರೆ.

ನಂತರ ಪತ್ನಿ ಸುಶೀಲಾ ಮನೆಯಲ್ಲಿದ್ದ ದಾಖಲೆ ಪತ್ರಗಳು,ಚೆಕ್ ಬುಕ್,ಐಟಿ ಫೈಲ್ಸ್ ಹಾಗೂ 260 ಗ್ರಾಂ ಚಿನ್ನಾಭರಣಗಳ ಜೊತೆ ಪ್ರಿಯಕರನ ಜತೆ ಪರಾರಿಯಾಗಿದ್ದಾಳೆ

ನೊಂದ ಪತಿ ಜಸ್ವಂತ್ ಸೋನಿ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪತ್ನಿ ಸುಶೀಲಾ ಪ್ರಿಯಕರ ರಾಜೇಶ್ ಕುಮಾರ್ ಸೋನಿ ಹಾಗೂ ರಾಕೇಶ್ ಕುಮಾರ್ ಸೋನಿ ವಿರುದ್ದ ಪ್ರಕರಣ ದಾಖಲಾಗಿದೆ.