ಮೈಸೂರು: ನಿಯತ್ತಿನ ಪ್ರಾಣಿಯೊಂದಿದ್ದರೆ ಅದು ಶ್ವಾನ, ಮನೆಯಲ್ಲಿ ಶ್ವಾನಗಳಿದ್ದರೆ ಓರ್ವ ಕಾವಲುಗಾರನಿದ್ದಂತೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಬಣ್ಣಿಸಿದರು.
ಮೈಸೂರಿನ ಸಿದ್ದಾರ್ಥ ಲೇಔಟ್ ನಲ್ಲಿರುವ ವೈಶಾಲಿ ಕಾನ್ವೆಂಟ್ ಮೈದಾನದಲ್ಲಿ ಮಲೆ ಮಾದೇಶ್ವರ ಸಂಸ್ಥೆ ಹಾಗೂ ಇನ್ನರ್ ವೀಲ್ ಗೋಲ್ಡ್ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ್ದ ವಿವಿಧ ತಳಿಯ
ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿ ಶಾಸಕರು ಮಾತನಾಡಿದರು.
ನಗರದ ಕೆಲವು ಭಾಗದಲ್ಲಿ ಒಂಟಿ ಮನೆಗಳೇ ಹೆಚ್ಚಾಗಿರುವುದರಿಂದ ಶ್ವಾನಗಳ ಅವಶ್ಯಕತೆ ಇದೆ, ಶ್ವಾನ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧ ಇರುವುದರಿಂದಲೇ ಜನರು ಶ್ವಾನ ಸಾಕುವುದು ರೂಢಿಯಾಗಿದೆ ಎಂದು ಹೇಳಿದರು.
10ತಳಿಯ 30 ಶ್ವಾನಗಳು ಪಾಲ್ಗೊಂಡು ಸಾರ್ವಜನಿಕರ ಗಮನ ಸೆಳೆದವು.
ರಾಟ್ ವೀಲರ್ ಶ್ವಾನಕ್ಕೆ ಪ್ರಥಮ ಬಹುಮಾನ ದೊರೆಯಿತು, ಹಸ್ಕಿ ತಳಿಗೆ ದ್ವಿತೀಯ ಬಹುಮಾನ, ಪಿಟ್ ಬುಲ್ ತಳಿಗೆ ತೃತೀಯ ಬಹುಮಾನ ಲಭಿಸಿತು.

ಈ ಶ್ವಾನಗಳ ಮಾಲೀಕರಿಗೆ ಶಾಸಕ ಟಿ ಎಸ್ ಶ್ರೀವತ್ಸ ಬಹುಮಾನ ವಿತರಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಇತರೆ ಶ್ವಾನ ಗಳ ಮಾಲೀಕರಿಗೆ ಪ್ರಶಂಸನಾ ಪತ್ರ ನೀಡಲಾಯಿತು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಜಿ ಶ್ರೀನಾಥ್ ಬಾಬು, ನಟಿ ಸ್ಮಿತಾ, ಮಲೆ ಮಾದೇಶ್ವರ ಸಂಸ್ಥೆಯ ಅಧ್ಯಕ್ಷರಾದ ಮಹಾನ್ ಅಚ್ಚು, ರವೀಂದ್ರ, ಪ್ರತಿಭಾ,ಆಲೂಕ್ ಜೈನ್, ಇನ್ನರ್ ವಿಲ್ ಕ್ಲಬ್ ಗೋಲ್ಡ್ ಅಧ್ಯಕ್ಷೆ ಪ್ರೇಮಾ ರವಿ, ಉಪಾಧ್ಯಕ್ಷೆ ಪ್ರತಿಭಾ, ಕಾರ್ಯದರ್ಶಿ ಅಂಶು ಅಗರ್ವಾಲ್ , ಶೀಲ, ಅಂಜಲಿ, ಚೇತನ್, ಜಿ ರಾಘವೇಂದ್ರ, ಆರ್ ಜೆ ಅವಿನಾಶ್ ಮತ್ತಿತರರು ಹಾಜರಿದ್ದರು.