ಮೈಸೂರು: ಆಂಧ್ರ ಪ್ರದೇಶದಂತೆ ನಮ್ಮ ರಾಜ್ಯದಲ್ಲೂ ವಕ್ಫ್ ಬೋರ್ಡ್ ವಜಾಗೊಳಿಸಬೇಕು ಎಂದು ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾನಂದೀಶ್ ಆಗ್ರಹಿಸಿದ್ದಾರೆ.
ವಕ್ಫ್ ಬೋರ್ಡ್ ಮಾಡಿರುವ ಭೂ ಕಬಳಿಕೆಯಿಂದ ರೈತರು, ಮಠ ಮಂದಿರಗಳು, ಶಿಕ್ಷಣ ಸಂಸ್ಥೆಯವರಿಗೆ ಅನ್ಯಾಯವಾಗಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ರೈತರ ಪರ, ಜನರ ಪರ, ಸಂವಿಧಾನದ ಪರ ಎಂದು ಹೇಳುತ್ತದೆ. ಅದನ್ನು ಈಗ ಮಾಡಿ ತೋರಿಸಬೇಕು ಎಂದು ಪ್ರಕಟಣೆಯಲ್ಲಿ ಅವರಯ ಒತ್ತಾಯಿಸಿದ್ದಾರೆ.
ವಕ್ಫ್ ಬೋರ್ಡ್ ಸಂವಿಧಾನ ವಿರೋಧಿ ಮಂಡಳಿ. ಇದರಿಂದ ದೇಶದ ಸ್ವಾಸ್ಥ್ಯ ಹಾಳಾಗುತ್ತಿದೆ. ವಕ್ಫ್ ಬೋರ್ಡ್ ಮೂಲಕ ರೈತರಿಗೆ ಕೊಟ್ಟಿರುವ ನೋಟಿಸ್ ಹಿಂಪಡೆದಿರುವುದು ಶಾಶ್ವತ ಪರಿಹಾರವಲ್ಲ. ಸರ್ಕಾರಕ್ಕೆ ನಿಜವಾಗಲೂ ರೈತರ ಮೇಲೆ ಕಾಳಜಿ ಇದ್ದರೆ ಅವರ ಪಹಣಿಯಲ್ಲಿ ರೈತರ ಹೆಸರು ಬರುವಂತೆ ನೋಡಿಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.