ಮೈಸೂರು: ನಗರದ ಕನಕಗಿರಿ, ಸುಯೇಜ್ ಫಾರಂ ರಸ್ತೆಯಲ್ಲಿರುವ ಭಾರತಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು ವಿತರಿಸಲಾಯಿತು.

ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ ಸದಾ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದು,ಇದು
220ನೇ ಸೇವಾ ಕಾರ್ಯಕ್ರಮವಾಗಿದೆ.
ಭಾರತಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ
ಹಣ್ಣು, ಹಂಪಲು ವಿತರಿಸಿ ಕ್ಷೇಮವನ್ನು ಹಾರೈಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಭಾರತಿ ವೃದ್ಧಾಶ್ರಮದ ನಾಗೇಶ್, ಹಿರಿಯ ಕ್ರೀಡಾಪಟು ಮಹಾದೇವ,ಛಾಯಾ,ಗಾಯಕ ಯಶ್ವಂತ್ ಕುಮಾರ್, ಪುರುಷೋತ್ತಮ್ ರಾಜೇಶ್ ಕುಮಾರ್, ಮಹೇಶ್, ಶ್ರೀಧರ್, ದತ್ತ, ಎಸ್.ಪಿ.ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್ ನಾಗೇಶ್ ಮತ್ತಿರರು ಹಾಜರಿದ್ದರು.