ಮೈಸೂರು: ಮೈಸೂರಿನ ಹಿನಕಲ್ ಗ್ರಾಮದ ವಿ.ಕೆ.ಪಬ್ಲಿಕ್ ಶಾಲೆಯಲ್ಲಿ ಸ್ವಚ್ಚತಾ ಅಭಿಯಾನ ಹಮ್ಮಿಕೊಂಡು ಸಾರ್ವಜನಿಕರಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಯಿತು.
ಈ ಕಾರ್ಯಕ್ರಮವನ್ನು ಹೂಟಗಳ್ಳಿ ನಗರಸಬೆ ವತಿಯಿಂದ ನಡೆಸಲಾಯಿತು.
ಚಾಮುಂಡೇಶ್ವರಿ ವಿಧಾನಸಬಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಪೌರಾಯುಕ್ತರಾದ ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರರು ಗಿರಿಜಾ,ಹೂಟಗಳ್ಳಿ ನಗರಸಬೆ ಆರೋಗ್ಯ ನಿರೀಕ್ಷಕರು ಹೂಟಗಳ್ಳಿ ಶಿವಪ್ರಸಾದ್ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿ. ಕೆ. ಪಬ್ಲಿಕ್ ಶಾಲೆಯ ಸಂಸ್ಥಾಪಕರಾದ ರವಿಕುಮಾರ್ ಪಾಲ್ಗೊಂಡಿದ್ದರು.
ಮುಖ್ಯ ಶಿಕ್ಷಕಿ ರೂಪಾ ಅವರು ಮಹಿಳೆಯರು ಉಪಯೋಗಿಸುವ ಸ್ಯಾನಿಟರಿ ಪ್ಯಾಡ್ ಗಳ ಬಗ್ಗೆ ಹಾಗೂ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿದರು.
ಕುಮುದ, ಶ್ರೀದೇವಿ ಹಾಗೂ ನಗರಸಬೆ ಸಮುದಾಯ ಸಂಚಾಲಕರು ಹಾಜರಿದ್ದರು.