ಮೈಸೂರು: ಸರ್ ಎಂ.ವಿಶ್ವೇಶ್ವರಯ್ಯನವರು ಕರುನಾಡು ಕಂಡ ಅಪೂರ್ವ ಎಂಜಿನಿಯರ್ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್ ಹೇಳಿದರು.
ರಾಮಾನುಜ ರಸ್ತೆಯಲ್ಲಿರುವ ಜ್ಯೋತಿರ್ಗಮಯ ವಿದ್ಯಾರ್ಥಿನಿಯರ ನಿಲಯದ ವಿದ್ಯಾರ್ಥಿಗಳಿಗೆ ಹಣ್ಣುಗಳು ಲೇಖನಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸರ್ ಎಂ ವಿಶ್ವೇಶ್ವರಯ್ಯನವರ ಜಯಂತಿಯನ್ನು ಆಚರಿಸಿ ನಂತರ ಅವರು ಮಾತನಾಡಿದರು.
ಸರ್.ಎಂ.ವಿ. ಕರ್ನಾಟಕದ ಪ್ರಾತಃ ಸ್ಮರಣೀಯರು,ಅವರ ದೂರದರ್ಶಿತ್ವದಿಂದ ಇಂದು ರಾಜ್ಯ ಮುನ್ನಡೆಯುತ್ತಿದೆ ಎಂದು ಹೇಳಿದರು.
ಹಿರಿಯ ಶಿಕ್ಷಕರಾದ ಸುಜಿಯರಾಣಿ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಶ್ರದ್ಧೆಯಿಂದ ವಿದ್ಯೆಯನ್ನು ಕಲಿತು ಸರ್ ಎಂ ವಿಶ್ವೇಶ್ವರಯ್ಯ ಅವರನ್ನು ಮಾದರಿಯನ್ನು ನಿಮ್ಮಗಳ ಜೀವನದಲ್ಲಿ ಅಳವಡಿಸಿಕೊಂಡು ಅವರ ರೀತಿಯಲ್ಲಿ ದೇಶಕ್ಕೆ ಏನಾದರೂ ಕೊಡುಗೆ ನೀಡುವಂತ ರಾಗಿ ಎಂದು ಸಲಹೆ ನೀಡಿದರು.
ಜ್ಯೋತಿರ್ಗಮಯ ವಿದ್ಯಾರ್ಥಿನಿಯರ ನಿಲಯದ ಮುಖ್ಯಸ್ಥರಾದ ಮಾದೇಶ್ , ಪ್ರೊ. ಬಿ.ಎಸ್. ಪ್ರೇಮಕುಮಾರಿ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಸುಬ್ರಮಣ್ಯ, ಛಾಯಾ, ಯಶವಂತ್ ಕುಮಾರ್,ವೀರಭದ್ರ ಸ್ವಾಮಿ, ಪುರುಷೋತ್ತಮ್,ಚಂದನ, ಎಂ ಎಸ್ ನಂದಿನಿ,ಎಸ್ ನಾಗೇಶ,ಮಹೇಶ್, ಮಹದೇವ ಸ್ವಾಮಿ, ನವನೀತ್ ಕುಮಾರ್,ಎಸ್.ಪಿ. ಅಕ್ಷಯ್ ಪ್ರಿಯಾದರ್ಶನ್, ,ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.