ಸರ್ಕಾರದ ನಾಮನಿರ್ದೇಶಕ ಸ್ಥಾನಗಳಿಗೆವಿಶ್ವಕರ್ಮ ಸಮಾಜದವರಿಗೆ ಆದ್ಯತೆ ನೀಡಲು ಮನವಿ

Spread the love

ಮೈಸೂರು: ಸರ್ಕಾರದ ನಾಮನಿರ್ದೇಶಕ ಸ್ಥಾನಗಳಿಗೆ ವಿಶ್ವಕರ್ಮ ಸಮಾಜದವರಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಮೈಸೂರು ಜಿಲ್ಲಾ ವಿಶ್ವಕರ್ಮ ಸಂಘದ ಜಿಲ್ಲಾಧ್ಯಕ್ಷರಾದ ರಿಷಿ ವಿಶ್ವಕರ್ಮ ಮನವಿ ಮಾಡಿದರು.

ಮೈಸೂರು ಜಿಲ್ಲಾ ವಿಶ್ವಕರ್ಮ ಸಂಘ, ಶ್ರೀ ವಿಶ್ವಕರ್ಮ ಪತ್ತಿನ ಸಹಕಾರ ಬ್ಯಾಂಕ್ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ಚಾಮರಾಜಪುರಂನಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ
ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು‌

ಉತ್ತರ ಭಾರತದ ರಾಜ್ಯಗಳಲ್ಲಿ ವಿಶ್ವಕರ್ಮ ಜಯಂತಿಯ ದಿನದಂದು ರಜಾ ಘೋಷಣೆ ಮಾಡಿದ್ದಾರೆ,ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಜಾ ದಿನವನ್ನಾಗಿ ಘೋಷಣೆ ಮಾಡಬೇಕು ಎಂದು ಕೋರಿದರು.

ಕರ್ನಾಟಕ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮ ಮಂಡಳಿಗೆ ವಿಶ್ವಕರ್ಮ ಜನಾಂಗದವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು, ನಮ್ಮ ಸಂಘಕ್ಕೆ ಸಮುದಾಯ ಭವನ ನಿರ್ಮಾಣ ಮಾಡಲು ಮೈಸೂರಿನಲ್ಲಿ ಒಂದು ಎಕರೆ ಭೂಮಿಯನ್ನು ಮಂಜೂರು ಮಾಡಿ 5 ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

ಶ್ರೀ ವಿಶ್ವಕರ್ಮ ಪತ್ತಿನ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಶ್ರೀ ಜಯರಾಮಚಾರ್ ಅವರು ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಸರ್ಕಾರದಿಂದ ಆಚರಣೆ ಮಾಡುವಂತೆ ಆದೇಶ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ. ಪಿ ನಂಜುಂಡಿ ವಿಶ್ವಕರ್ಮ ಹಾಗೂ ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ನಗರ ಅಧ್ಯಕ್ಷ ಸಿದ್ದಾಚಾರ್, ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಸಿಂಧುಹಳ್ಳಿ ಲೋಕೇಶ್, ಹಿರಿಯರಾದ ಅರಕೇಶ್ವರಚಾರ್ ,ಕಾಳಿಕಾಂಬ ದೇವಸ್ಥಾನ ಕಾರ್ಯದರ್ಶಿ ಈಶ್ವರಚಾರ್,ಮಂಜುನಾಥ್ ಸೋಮಶೇಖರ್, ವಿನಾಯಕ ಕಣಗಾಲ್, ಎಸ್ ಎನ್ ರಾಜೇಶ್, ರಾಕೇಶ್, ರಂಗನಾಥ್, ಸುಚೇಂದ್ರ,ಚಕ್ರಪಾಣಿ ಮತ್ತಿತರರು ಭಾಗವಹಿಸಿದ್ದರು.