ಮೈಸೂರು: ಮೈಸೂರಿನ ಉದ್ಬೂರು ಸಮೀಪ ಇರುವ ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರವರ 15ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ವಿಷ್ಣುವರ್ಧನ್ ಪ್ರತಿಮೆಗೆ ವಿಷ್ಣು ಪತ್ನಿ, ನಟಿ ಭಾರತಿ ಪೂಜೆ ಸಲ್ಲಿಸಿದರು.
ವಿಷ್ಣು ಪ್ರತಿಮೆಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ನಟ ಅನಿರುದ್ ಅವರೊಂದಿಗೆ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗ ಹೊರತಂದಿರುವ ವಿಷ್ಣುವರ್ಧನ್ ಅವರ ಕೋಟಿಗೊಬ್ಬ 2025 ರ
ಕ್ಯಾಲೆಂಡರ್ ಬಿಡುಗಡೆಗೊಳಿಸಿದರು

ಈ ವೇಳೆ ಭಾರತಿ ವಿಷ್ಣುವರ್ಧನ್ ಹಾಗೂ ಅನಿರುದ್ಧ ಅವರು ವಿಷ್ಣುವರ್ಧನ್ ಅಭಿಮಾನಿ ಬಳಗಕ್ಕೆ ಶುಭ ಹಾರೈಸಿದರು. ನಂತರ ಜೀವದಾರ ರಕ್ತ ನಿಧಿ ಕೇಂದ್ರ ಆಯೋಜಿಸಿರುವ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.
ಈ ವೇಳೆ 60ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು ಬಳಿಕ ಅಭಿಮಾನಿಗಳಿಗೆ ಅನ್ನ ಸಂತರ್ಪಣೆಗೆ ಭಾರತಿ ಚಾಲನೆ ನೀಡಿದರು.
ಈ ವೇಳೆ ವಿಷ್ಣು ಅಭಿಮಾನಿಗಳ ಸಂಘದ ಒಕ್ಕೂಟದ ಅಧ್ಯಕ್ಷ ಎಂ. ಡಿ ಪಾರ್ಥಸಾರಥಿ, ಆಲ್ವಿನ್,ಸಮಾಜ ಸೇವಕರಾದ ವಿಕ್ರಂ ಅಯ್ಯಂಗಾರ್, ಎಂ ಎನ್ ಚೇತನ್ ಗೌಡ, ಲಕ್ಷ್ಮಣ, ಮಹದೇವ್, ಜೀವದಾರ ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳಾದ ಸುರೇಶ್, ಪ್ರಭು,
ಸಂತೋಷ್ ,ಸಿದ್ದಪ್ಪ, ಬಸವರಾಜು ಮತ್ತಿತರರು ಹಾಜರಿದ್ದರು.