ದ್ವಂಸವಾದ ಜಾಗದಲ್ಲಿ ಸ್ಮಾರಕ ನಿರ್ಮಿಸಿ: ಸರ್ಕಾರಕ್ಕೆ ರಕ್ತದಲ್ಲಿ ವಿಷ್ಣು ಅಭಿಮಾನಿ ಪತ್ರ

Spread the love

ಮೈಸೂರು: ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ನೆಲಸಮವಾಗಿರುವ ಚಿತ್ರನಟ ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕವನ್ನು ಅದೇ ಸ್ಥಳದಲ್ಲಿ ಮರು ನಿರ್ಮಾಣ ಮಾಡಬೇಕು ಎಂದು ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ ಎನ್ ರಾಜೇಶ್ ಮುಖ್ಯಮಂತ್ರಿಯಲ್ಲಿ ಮನವಿ ಮಾಡಿದ್ದಾರೆ.

ಅದೂ ಕೇವಲ ಮನವಿಯಲ್ಲಾ,ರಕ್ತದಲ್ಲಿ ಪತ್ರ ಬರೆಯುವ ಮೂಲಕ ರಾಜೇಶ್ ಸರ್ಕಾರ ಸೇರಿ ಎಲ್ಲರ ಗಮನ ಸೆಳೆದಿದ್ದಾರೆ.

ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ಎನ್ ರಾಜೇಶ್ ಅವರು ತಮ್ಮದೇ ರಕ್ತದಲ್ಲಿ ದ್ವಂಸವಾದ ಜಾಗದಲ್ಲಿ ಸ್ಮಾರಕ ನಿರ್ಮಿಸಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಎಲ್ಲಿಂದಲೋ ಪೋಸ್ಟ್‌ ಮಾಡಿದರೆ ತಡವಾಗಬಹುದೆಂದು ಮುಖ್ಯಮಂತ್ರಿ ಕಚೇರಿಗೆ ನೆಹರು ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲೇ ಅಂಚೆ ಹಾಕುವ ಮೂಲಕ ಮನವಿ ಅವರು ಮಾಡಿದ್ದಾರೆ.

ಈ‌ ವೇಳೆ ಮಾತನಾಡಿದ ರಾಜೇಶ್,
ಮೇರು ನಟನ ಸ್ಮಾರಕ ತೆರವುಗೊಳಿಸಿ
ರುವುದು ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ. ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಸ್ಮಾರಕ ಮರು ನಿರ್ಮಾಣ ಮಾಡಬೇಕು ಎಂದು ಲಕ್ಷಾಂತರ ವಿಷ್ಣು ಅಭಿಮಾನಿಗಳ ಪರವಾಗಿ ಮುಖ್ಯಮಂತ್ರಿಗಳಿಗೆ‌ ಮನವಿ ಮಾಡಿದ್ದೇನೆ ಎಂದು ಹೇಳಿದರು

ಈ ಸಂದರ್ಭದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳಾದ ನಜರ್ಬಾದ್ ನಟರಾಜ್, ಆಟೋ ಚಾಲಕರಾದ ಸದಾಶಿವ್, ರುದ್ರಮೂರ್ತಿ,ಸ್ಯಾಮ್ಯುಯೆಲ್ ವಿಲ್ಸನ್, ಹರೀಶ್ ನಾಯ್ಡು, ಸೂರಜ್, ಚಂದ್ರು, ಮತ್ತಿತರರು ಹಾಜರಿದ್ದರು.