ಮೈಸೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಬ್ರಾಹ್ಮಣ ಮಹಾ ಸಮ್ಮೇಳನ ನಮ್ಮ ಪರಂಪರೆ, ಸಾಂಸ್ಕೃತಿಕ ಶ್ರೇಷ್ಠತೆಯನ್ನು ಪುನರುಜ್ಜೀವನ ಗೊಳಿಸುವ ಅವಕಾಶವಾಗಿದೆ ಎಂದು ಹೆಚ್.ವಿ. ರಾಜೀವ್
ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 50ನೇ ಸುವರ್ಣ ಸಂಭ್ರಮದ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವಾಮಿತ್ರ ಸಮ್ಮೇಳನ ವಿಜೃಂಭಣೆಯಿಂದ ನಡೆಸುತ್ತಿರುವ ಹಿನ್ನೆಲೆ ಮೈಸೂರಿನಿಂದ ಸಹಸ್ರಾರು ವಿಪ್ರ ಬಂಧುಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ ವೇಳೆ ರಾಜೀವ್ ಮಾತನಾಡಿದರು.
ಬ್ರಾಹ್ಮಣ ಸಮಾಜದ ಒಗ್ಗಟ್ಟಿಗೆ, ಅಭಿವೃದ್ಧಿಗೆ ಮತ್ತು ಯುವಕರಿಗೆ ಹೊಸ ದಾರಿ ತೋರಿಸಲು ಇದು ಮಹತ್ತರ ವೇದಿಕೆಯಾಗಿದೆ, ನಮ್ಮ ಪರಂಪರೆಯ ಗೌರವವನ್ನು ಉಳಿಸಲು ಮತ್ತು ಮುಂದಿನ ತಲೆಮಾರಿನ ಭವಿಷ್ಯವನ್ನು ಕಟ್ಟಲು ನಾವು ಎಲ್ಲರೂ ಒಂದಾಗಬೇಕಾಗಿದೆ,
ಸಮಾಜದ ಏಕತೆ, ಪ್ರಗತಿ ಮತ್ತು ಅಭಿವೃದ್ದಿಗೆ ಶ್ರಮಿಸಬೇಕಾದ ಅಗತ್ಯವಿದೆ ಎಂದು ಹೆಚ್.ವಿ.ರಾಜೀವ್ ಒತ್ತಿಹೇಳಿದರು.
ಬ್ರಾಹ್ಮಣ ಮಹಾಸಭೆಯ ನಂ ಶ್ರೀಕಂಠಕುಮಾರ್ ಅವರು ಮಾತನಾಡಿ, ಮೈಸೂರಿನಿಂದ ಈ ಬೃಹತ್ ಕಾರ್ಯಕ್ಕೆ ಯಶಸ್ವಿಯಾಗಿ ಸಂಘಟಿಸಿ, ಸಹಸ್ರಾರು ಜನರನ್ನು ಇಲ್ಲಿ ಸೇರಿಸುವಲ್ಲಿ ಹೆಚ್.ವಿ. ರಾಜೀವ್ ಅವರ ಶ್ರಮ ಅಪ್ರತಿಮವಾಗಿದೆ ಎಂದು ಶ್ಲಾಘಿಸಿದರು.
ಈ ಸಂಧರ್ಭದಲ್ಲಿ ದಿನೇಶ್, ಶಂಕನಾರಾಯಣ್, ಪ್ರಕಾಶ್ ,ಭಕ್ತ ವತ್ಸಲ, ರಾಜೇಶ್ ಬೋರೆ, ಡಾಕ್ಟರ್ ಲಕ್ಷ್ಮಿ, ಲತಾ ಮೋಹನ್, ಸಂಧ್ಯಾ, ವಿಶ್ವನಾಥ್, ವಾಸುದೇವ ಮೂರ್ತಿ, ಶೇಷಪ್ರಸಾದ್,ಎಸ್ ರಂಗನಾಥ, ಶ್ರೀನಾಥ್, ದತ್ತ, ವನಜ, ಪದ್ಮನಾರಾಯಣ್,ಎಸ್.ದಿನೇಶ್ ಮತ್ತಿತರರು ಹಾಜರಿದ್ದರು.