ವಿಪ್ರರು ಬ್ರಾಹ್ಮಣ ಮಾಹಾಸಭಾ ಸದಸ್ಯರಾಗಲು ಟಿ.ಎಸ್. ಶ್ರೀವತ್ಸ ಕರೆ

Spread the love

ಮೈಸೂರು: ಬ್ರಾಹ್ಮಣರು ಒಗ್ಗೂಡಲು ವಿಪ್ರ ಸಂಘಸಂಸ್ಥೆಗಳ ಮಾತೃ ಸಂಸ್ಥೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯರಾಗಲು ಮುಂದಾಗಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಕರೆ ನೀಡಿದರು.

ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಶ್ರೀವತ್ಸ ಮಾತನಾಡಿದರು.

ಮೈಸೂರಿನ ಬ್ರಾಹ್ಮಣ ಸಂಘ ಸಂಸ್ಥೆಗಳಲ್ಲಿ ಬ್ರಾಹ್ಮಣ ಯುವ ವೇದಿಕೆಯ ಪದಾಧಿಕಾರಿಗಳ ತಂಡ ಬ್ರಾಹ್ಮಣ ಮಹಾಸಭಾ ಸದಸ್ಯತ್ವ ಅಭಿಯಾನವನ್ನ ನಿರಂತರವಾಗಿ ನಡೆಸಲು ಯೋಜಿಸಲಾಗಿದ್ದು, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಶಿಕ್ಷಣ, ಉದ್ಯೋಗ, ವೈದ್ಯಕೀಯ, ಸಹಕಾರಿ ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಪ್ರೋತ್ಸಾಹ ನೀಡಲು ಬ್ರಾಹ್ಮಣ ಮಹಸಭಾ ರಾಜ್ಯಾಧ್ಯಕ್ಷರಾದ ರಘುನಾಥ್ ನೇತೃತ್ವದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಬ್ರಾಹ್ಮಣ ಹಿರಿಯ ಮುಖಂಡರಾದ ಕೆ. ರಘುರಾಂ ವಾಜಪೇಯಿ ಮಾತನಾಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಯುವಕರನ್ನ ಮುಖ್ಯವಾಹಿನಿಗೆ ತರಲು ರಾಜ್ಯದೆಲ್ಲಡೆ ವಿಪ್ರ ಯುವ ವೇದಿಕೆ ಸಮಿತಿ ರಚಿಸಿ ಬಲಿಷ್ಠಗೊಳಿಸಲಾಗುತ್ತಿದ್ದು, ಸಾಮಾಜಿಕವಾಗಿ ಯುವಕರು ಸಂಘಟಿತರಾಗಬೇಕು ಎಂದು ತಿಳಿಹೇಳಿದರು.

ಈ ವೇಳೆ ಮೈಸೂರಿನ‌ ವಿವಿಧ ಬಡಾವಣೆಯ 150ಕ್ಕೂ ಹೆಚ್ಚು ಬ್ರಾಹ್ಮಣರು ನೊಂದಣಿ ಮಾಡುಸಿ ಸದಸ್ಯರಾದರು

ವಿಪ್ರ ಮುಖಂಡರಾದ ನo ಶ್ರೀಕಂಠ ಕುಮಾರ್ ಮಾತನಾಡಿ,
ಮೇ2ರಂದು ಕಲಾಮಂದಿರದಲ್ಲಿ ಮೈಸೂರಿನ ಜಿಲ್ಲಾಡಳಿತ ವತಿಯಿಂದ ನಡೆಯುತ್ತಿರುವ ಶಂಕರ ಜಯಂತಿ ಕಾರ್ಯಕ್ರಮಕ್ಕೆ ವಿಪ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್.ಎನ್ ಶ್ರೀಧರಮೂರ್ತಿ ಅವರು ಮಾತನಾಡಿ ಬ್ರಾಹ್ಮಣರನ್ನ ಉದ್ಯೋಗಸ್ಥರನ್ನಾಗಿ ಪ್ರೋತ್ಸಾಹಿಸಲು ವಿವಿಧ ಕ್ಷೇತ್ರದ ಸಣ್ಣಪುಟ್ಟ ಉದ್ಯೋಸ್ಥರಿಂದ ಬೃಹತ್ ಕೈಗಾರಿಕೋದ್ಯಮಿ ವರೆಗೂ ವಿಪ್ರ ಪರಿವಾರ ಎಂಬ ಎ ಟು ಜೆಡ್ ಬ್ರಾಹ್ಮಿನ್ಸ್ ಕೈಪಿಡಿ ಹೊರತರಲಾಗುತ್ತಿದೆ, ವಿಪ್ರರು ಬ್ರಾಹ್ಮಣ ಮಹಾಸಭಾ ಸದಸ್ಯರಾಗಲು ವಿಪ್ರಸಹಾಯವಾಣಿ 9880752727 ಸಂಪರ್ಕಸಿ ಎಂದು ಕೋರಿದರು

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಡಾ.ಲಕ್ಷ್ಮೀದೇವಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಖಜಾಂಜಿ ಅಜಯ್ ಶಾಸ್ತ್ರಿ, ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಖಜಾಂಚಿ ಕೆ ನಾಗರಾಜ್,ಸುಚೇಂದ್ರ,ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕರಾದ ವಿಜಯ್ ಕುಮಾರ್, ಗುರುರಾಜ್, ಮಂಜುನಾಥ್,ಉಮೇಶ್,ಗಣೇಶ್ ಪ್ರಸಾದ್, ಓಂ ಶ್ರೀನಿವಾಸ್,ವಿ. ಎನ್ ಕೃಷ್ಣ ಮತ್ತಿತರರು ಹಾಜರಿದ್ದರು.