ವಿಪ್ರ ಜಾಗೃತಿ ವೇದಿಕೆಯ ನೂತನಕ್ಯಾಲೆಂಡರ್ ಬಿಡುಗಡೆ

Spread the love

ಮೈಸೂರು:‌ ಮೈಸೂರಿನ ವಿಪ್ರ ಜಾಗೃತಿ ವೇದಿಕೆಯು 2025ನೇ ವರ್ಷದ ಕ್ಯಾಲೆಂಡರ್ ಹೊರತಂದಿದ್ದು, ಮಾಜಿ ಮೂಡ ಮಾಜಿ ಅಧ್ಯಕ್ಷ ಹೆಚ್ ವಿ ರಾಜೀವ್ ಬಿಡುಗಡೆಗೊಳಿಸಿದರು.

ವಿದ್ಯಾರಣ್ಯಪುರಂನ ಅವನಿ ಶಂಕರ ಮಠದಲ್ಲಿ ವಿಪ್ರ ಜಾಗೃತಿ ವೇದಿಕೆಯ 2025ನೇ ಕ್ಯಾಲೆಂಡರ್ ಅನ್ನು ಹೆಚ್ ವಿ ರಾಜೀವ್ ಬಿಡುಗಡೆಗೊಳಿಸಿ ಎಲ್ಲರಿಗೂ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಸಮಾಜಸೇವಕರಾದ ಕೆ ರಘುರಾಮ್ ವಾಜಪೇಯಿ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ ಆರ್ ಸತ್ಯನಾರಾಯಣ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ನo ಶ್ರೀಕಂಠಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯರಾದ ಮಾ ವಿ ರಾಮಪ್ರಸಾದ್, ವಿಪ್ರ ಮಹಿಳಾ ಸಂಘದ ಅಧ್ಯಕ್ಷೆ ಡಾಕ್ಟರ್ ಲಕ್ಷ್ಮೀದೇವಿ, ಮತ್ತು ವಿಪ್ರಜಾಗೃತಿ ವೇದಿಕೆಯ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ಪ್ರಭಾ, ಕಾರ್ಯದರ್ಶಿ ಸುರೇಶ್ ಮುಳ್ಳೂರು, ಖಜಾಂಜಿ ಮಂಜುನಾಥ್, ಸುಚಿಂದ್ರ ಹಾಗೂ ಪದಾಧಿಕಾರಿಗಳು ಹಾಜರಿದ್ದರು.