ಅ.7ರಂದು ಮೈಸೂರಿನಲ್ಲಿ ವಿಪ್ರ ಸಮ್ಮೇಳನದ ಪೂರ್ವಭಾವಿ‌ ಸಭೆ

Spread the love

ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಸಂಭ್ರಮ ಹಾಗೂ 11ನೇ ರಾಜ್ಯಮಟ್ಟದ ವಿಪ್ರ ಸಮ್ಮೇಳನವು
2025ರ ಜನವರಿ18, 19 ರಂದು ನಡೆಯಲಿದ್ದು,ಅ. 7 ಕ್ಕೆ ಮೈಸೂರಿನಲ್ಲಿ ಇದರ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ.

ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಅವರು ಈ‌ ಬಗ್ಗೆ ಮಾತನಾಡಿ,
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ
ರಾಜ್ಯಾಧ್ಯಕ್ಷ ಅಶೋಕ್ ಹಾರನಹಳ್ಳಿಯವರ ನೇತೃತ್ವದಲ್ಲಿ ಮುಂದಿನ ಜ.18,19 ರಂದು ಸುವರ್ಣ ಸಂಭ್ರಮ ಹಾಗೂ ವಿಪ್ರ ಸಮ್ಮೇಳನ
ಬೆಂಗಳೂರಿನಲ್ಲಿ ಜರುಗಲಿದೆ ಎಂದು ತಿಳಿಸಿದರು.

ಇದಕ್ಕೆ ಪೂರ್ವಭಾವಿಯಾಗಿ ಮೈಸೂರಿನ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ
ಇದೇ ಸೋಮವಾರ ಬೆಳಗ್ಗೆ 11ಕ್ಕೆ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಅಶೋಕ್ ಹಾರನಹಳ್ಳಿಯವರು ಆಗಮಿಸಿ ಸುವರ್ಣ ಸಂಭ್ರಮ ಹಾಗೂ ವಿಪ್ರ ಸಮ್ಮೇಳನದ ಪೂರ್ಣ ವಿವರಗಳನ್ನು ನೀಡಲಿದ್ದಾರೆ ಎಂದು ಡಿ.ಟಿ ಪ್ರಕಾಶ್ ಹೇಳಿದರು.

ಮೈಸೂರು ಜಿಲ್ಲೆಯ ಎಲ್ಲಾ ಬ್ರಾಹ್ಮಣ ಸಂಘಟನೆಗಳ ಪದಾಧಿಕಾರಿಗಳು ಸಭೆಗೆ ಆಗಮಿಸಿ ಸಮಾಲೋಚನೆ ನಡೆಸುವ ಉದ್ದೇಶದಿಂದ ಸಭೆ ನಡೆಯಲಾಗಿದ್ದು, ಮೈಸೂರು ನಗರ ಜಿಲ್ಲೆಯ ಎಲ್ಲಾ ಬ್ರಾಹ್ಮಣ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ವಿಪ್ರ ಮುಖಂಡರು ಪಾಲ್ಗೊಳ್ಳಬೇಕೆಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ. ಆರ್ ಬಾಲಕೃಷ್ಣ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ ಆರ್ ಸತ್ಯನಾರಾಯಣ್, ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ ರಾವ್, ಡಾ. ಲಕ್ಷ್ಮಿ ,ರಾಕೇಶ್ ಭಟ್, ಕೆ.ಎಂ. ನಿಶಾಂತ್, ಅಪೂರ್ವ ಸುರೇಶ್, ಚಕ್ರಪಾಣಿ, ಸುಚಿಂದ್ರ, ಉಪಸ್ಥಿತರಿದ್ದರು.