ಬಿ.ವೈ. ವಿಜಯೇಂದ್ರ ಹುಟ್ಟುಹಬ್ಬ-ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ವತಿಯಿಂದ ಬೋಗಾದಿ ಉತ್ತರ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ವಿಜೇಯೇಂದ್ರ ಅವರ ಹೆಸರಿನಲ್ಲಿ ಕುಂಕುಮಾರ್ಚನೆ ಹಾಗೂ ನೈವೇದ್ಯ ಸಲ್ಲಿಸಿ ಪ್ರಾರ್ಥಿಸಲಾಯಿತು.

ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್, ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು, ಮಂಡಲದ ಉಪಾಧ್ಯಕ್ಷರಾದ ಶಿವು ಪಟೇಲ್, ಹೆಚ್.ಎಸ್. ಹಿರಿಯಣ್ಣ, ಬಿ.ಸಿ.ಶಶಿಕಾಂತ್, ನಾಗರಾಜ್ ಜನ್ನು, ಕಾರ್ಯದರ್ಶಿ ಪಿ.ಸೋಮಣ್ಣ, ಎಸ್.ಟಿ. ಮೋರ್ಚಾದ ಎಸ್.ತ್ಯಾಗರಾಜ್, ಟಿ.ರಾಜನಾಯಕ, ಎಸ್.ಮಹೇಶ್ ಕುಮಾರ್, ನಾಗೇಶ್ ನಾಯಕ್, ಪ್ರಜ್ವಲ್, ಹಿಂದುಳಿದ ವರ್ಗಗಳ ಮೋರ್ಚಾದ ರಂಗೇಶ್, ಯುವ ಮೋರ್ಚಾದ ಚಂದನ್ ಗೌಡ, ರಾಘವೇಂದ್ರ, ಮಧು, ವಾರ್ಡ್ ಅಧ್ಯಕ್ಷರಾದ ಭಾರ್ಗವ್ ಗೌಡ, ಮುಖಂಡರಾದ ಭೈರೇಗೌಡ, ಎಸ್.ಮಧು, ಪ್ರವೀಣ್, ನಾಗೇಶ್, ದೇವರಾಜ್, ಲೋಕೇಶ್ ರೆಡ್ಡಿ, ಮಂಜುನಾಥ್ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.