ಮೈಸೂರು: ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷರೂ
ಶಾಸಕರಾದ ಬಿ ವೈ ವಿಜೇಂದ್ರ ಅವರ ಹುಟ್ಟುಹಬ್ಬವನ್ನು ನೂರಾರು ಗಿಡಗಳನ್ನು ನೆಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ನಗರದ ಕೆ ಸಿ ಬಡಾವಣೆಯಲ್ಲಿರುವ ಉದ್ಯಾನವನದಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ವಿವಿಧ ತಳಿಯ ಬೇವು ಹೊಂಗೆ ಮಾವು ಇನ್ನಿತರ ಗಿಡಗಳನ್ನು ನೆಟ್ಟು ನೀರು ಹಾಕಲಾಯಿತು.
ಈ ವೇಳೆ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ರಘು ಕೌಟಿಲ್ಯ ಅವರು,ಬಿ.ವೈ. ವಿಜೇಂದ್ರ ಅವರ ಸಾಮಾಜಿಕ ಕಳಕಳಿ ಇರುವುದರಿಂದ ಪರಿಸರ ಉಳಿಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆ ಸಂದೇಶ ಕೊಡುವ ಉದ್ದೇಶದಿಂದ ಯಾವುದೇ ರೀತಿಯ ಆಡಂಬರವಿಲ್ಲದೆ ಗಿಡಗಳನ್ನು ನೆಟ್ಟು
ಅವರ ಜನುಮದಿನ ಆಚರಿಸಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು ಸುಮಾರು 60 ಸಾವಿರ ಗಿಡಗಳನ್ನು ನಡೆಸುವ ಮೂಲಕ ಹಿಂದುಳಿದ ವರ್ಗಗಳ ಮೋರ್ಚ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುತ್ತಿದೆ, ಆಡಂಬರವಿಲ್ಲದೆ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಅರ್ಥಪೂರ್ಣವಾಗಿ ಆಚರಣೆ ಮಾಡುವುದು ಸಂತೋಷ ತಂದಿದೆ ಎಂದು ಹೇಳಿದರು
ನಗರದ ಅಧ್ಯಕ್ಷ ಮೈ.ಪು.ರಾಜೇಶ್, ಕೆ.ಆರ್ ಕ್ಷೇತ್ರದ ಅಧ್ಯಕ್ಷ,ರಘು ಅರಸ್, ಹರೀಶ್, ನಗರ ಪ್ರಧಾನಕಾರ್ಯದರ್ಶಿ ಗಿರಿಧರ್,ಉಪಾಧ್ಯಕ್ಷ ಜೋಗಿಮಂಜು, ಮಾಜಿನಗರ ಪಾಲಿಕೆ ಸದಸ್ಯರಾದ ಛಾಯಾದೇವಿ, ಕೆ ಜೆ ರಮೇಶ್,ಬಾಬಣ್ಣಪ್ರಸನ್ನ, ಪ್ರಧಾನ ಕಾರ್ಯದರ್ಶಿಗಳಾದ ಉಪೇಂದ್ರ, ಗಿರೀಶ್,ಸತೀಶ್, ಗೋಕುಲ್ ಗೋವರ್ಧನ್, ಹರೀಶ್, ಚಂದ್ರು, ನಂದಾ ಸಿಂಗ್, ರವಿಶಂಕರ್, ಕೃಷ್ಣ, ಜಗದೀಶ್ ಮತ್ತಿತರರು ಹಾಜರಿದ್ದರು.