ಮೈಸೂರು: ವಿಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ಕು ಆರೋಪಿಗಳನ್ನು ಬಂಧಿಸಿ
೩,೦೦,೦೦೦ ರೂ ಮೌಲ್ಯದ ಫ್ಯಾಕ್ಟರಿ ಮೋಟಾರ್ ಇಂಜಿನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ೨ ಗೂಡ್ಸ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ
ನಗರದ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಡೀಕೇಮ್
ರೆಸಿನ್ಸ್ ಲಿಮಿಟೆಡ್ ಸ್ಟೋರ್‌ನ ರೋಲಿಂಗ್ ಶೆಲ್ಟರ್ ಮೀಟಿ ಫ್ಯಾಕ್ಟರಿಯಲ್ಲಿದ್ದ ಬೆಲೆಬಾಳುವ ಮೋಟಾರ್‌ಗಳು, ಕಬ್ಬಿಣದ
ಪದಾರ್ಥಗಳನ್ನು ಕಳುವು ಮಾಡಲಾಗಿತ್ತು,
ಈ ಬಗ್ಗೆ ವಿಜಯನಗರ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ಆರೋಪಿಗಳನ್ನು ಪತ್ತೆ ಹಚ್ಚಲು ಬಲೆ ಬೀಸಲಾಗಿತ್ತು.
ವಿಜಯನಗರ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಗಸ್ತಿನಲ್ಲಿರುವಾಗ ಖಚಿತ ಮಾಹಿತಿ ಮೇರೆಗೆ ಕೆ.ಆರ್.ಎಸ್
ರಸ್ತೆಯಲ್ಲಿರುವ ಕುಸುಮ ಚಂದ್ರಶೇಖರ್ ಕಲ್ಯಾಣ ಮಂಟಪದ ಬಳಿ
೪ ಆರೋಪಿಗಳು ೨ ಗೂಡ್ಸ್ ವಾಹನಗಳಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ಮಾಲುಗಳನ್ನು ತುಂಬಿ ಕೊಂಡು ಹೋಗುತ್ತಿದ್ದಾಗ ದಾಳಿ ಮಾಡಲಾಯಿತು.
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣಕ್ಕೆ ಸತ್ಯ ಬಾಯಿಬಿಟ್ಟಿದ್ದಾರೆ.
ಆರೋಪಿಗಳಿಂದ ಒಟ್ಟು ೩,೦೦,೦೦೦ ರೂ ಮೌಲ್ಯದ ಬೆಲೆಬಾಳುವ ಫ್ಯಾಕ್ಟರಿ
ಮೋಟಾರ್ ಇಂಜಿನಗಳು ಹಾಗೂ ಕೃತ್ಯಕ್ಕೆ
ಬಳಸಿದ್ದ ೨ ಗೂಡ್ಸ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಕೇಂದ್ರ ಭಾಗದ ಡಿ.ಸಿ.ಪಿ
ಮಾರ್ಗದರ್ಶನದಲ್ಲಿ, ವಿಜಯನಗರ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ವಿಜಯನಗರ ಪೊಲೀಸ್
ಇನ್ಸ್ಪೆಕ್ಟರ್ ಸುರೇಶ್‌ಕುಮಾರ್ ಎಸ್.ಡಿ, ಪಿ.ಎಸ್.ಐ ನಾರಾಯಣ್ ಮತ್ತು ಕೃಷ್ಣ ಡಿ. ಸಿಬ್ಬಂದಿ ಶಂಕರ್,ಪ್ರದೀಪ್ ಕುಮಾರ್ ಹೆಚ್.ಕೆ, ಪರಮೇಶ ಬಿ, ಲೋಕೇಶ್ ಕೆ.ಎನ್,
ಮಂಜುನಾಥ್ ಕೆ.ಎನ್, ವೆಂಕಟೇಶ್, ಪರಮೇಶ್, ರಂಜಿತ, ತಾಂತ್ರಿಕ
ಸಿಬ್ಬಂದಿ ಕುಮಾರ್, ಮಂಜು, ಶ್ಯಾಮ್,
ಅಟೋಮೆಷನ್ ಕೇಂದ್ರ ಅಧಿಕಾರಿ ಪಿ.ಎಸ್.ಐ ಚಂದ್ರಶೇಖರ್ ರಾವ್ ಮತ್ತು ಸಿಬ್ಬಂದಿ ಪ್ರದೀಪ್ ಕೈಗೊಂಡಿದ್ದರು.
