ಮೈಸೂರು: ಸ್ನೇಹಿತನ ತಂಗಿ ಬಗ್ಗೆ ಅಪಪ್ರಚಾರ ಮಾಡಿದ್ದಕ್ಕೆ ಬುದ್ದಿ ಹೇಳಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ 8 ಮಂದಿಯನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ
ದರ್ಶನ್ ಹಲ್ಲೆಗೆ ಒಳಗಾದ ಯುವಕ.
8 ಮಂದಿ ಆರೋಪಿಗಳ ಪೈಕಿ ಒಬ್ಬ ಕಳ್ಳ ಶಿವು @ ಶಿವಕುಮಾರ್ ರೌಡಿ ಶೀಟರ್ ಆಗಿದ್ದು ಗಡೀಪಾರಾಗಿದ್ದ.ಎರಡು ದಿನಗಳ ಹಿಂದಷ್ಟೆ ಗಡೀಪಾರು ಶಿಕ್ಷೆ ಮುಗಿಸಿ ಬಂದು ಈ ಕೃತ್ಯವೆಸಗಿದ್ದ.
ಕಳ್ಳ ಶಿವು ಅಲಿಯಾಸ್ ಶಿವಕುಮಾರ್,ಪ್ರಜ್ವಲ್ ಅಲಿಯಾಸ್ ಸ್ಪಾಟ್,ಧನರಾಜ್ ಅಲಿಯಾಸ್ ಮನು,ಹೃಷಿತ್ ಅಲಿಯಾಸ್ ಕುಳ್ಳಿ,ಖಜಾನೆ,ಶರತ್,ಹಾಲುಮಂಜ ಹಾಗೂ ಪವನ್ ಅಲಿಯಾಸ್ ಪಮ್ಮಿ ಬಂಧಿತರು.
ನಾಲ್ಕು ತಿಂಗಳ ಹಿಂದೆ ದರ್ಶನ್ ಸ್ನೇಹಿತ ಪ್ರಸಾದ್ ತಂಗಿಯ ಬಗ್ಗೆ ಪ್ರಜ್ವಲ್ ಅಲಿಯಾಸ್ ಸ್ಪಾಟ್ ಅಪಪ್ರಚಾರ ಮಾಡಿದ್ದ.
ಈ ಬಗ್ಗೆ ಬುದ್ದಿವಾದ ಹೇಳುವಂತೆ ಆದರ್ಶ್ ಗೆ ಪ್ರಸಾದ್ ಹೇಳಿಕೊಂಡಿದ್ದ.ಅದರಂತೆ ಪ್ರಜ್ವಲ್@ಸ್ಪಾಟ್ ಗೆ ನಾಲ್ಕು ತಿಂಗಳ ಹಿಂದೆ ಆದರ್ಶ್ ಬುದ್ದಿವಾದ ಹೇಳಿ ಬಂದಿದ್ದ.ಇದನ್ನೇ ಧ್ವೇಷವಾಗಿ ಬೆಳೆಸಿಕೊಂಡ ಪ್ರಜ್ವಲ್ ಫೆ.3 ರಂದು ಹೂಟಗಳ್ಳಿಯ ಸಿಗ್ನಲ್ ಲೈಟ್ ಬಳಿ ರಾತ್ರಿ ಆದರ್ಶ್ ತನ್ನ ಸ್ನೇಹಿತರ ಜೊತೆ ಮಾತನಾಡುತ್ತ ಕುಳಿತಿದ್ದಾಗ ಪ್ರಜ್ವಲ್,ಕಳ್ಳಶಿವು,ಧನರಾಜ್ ಸೇರಿದಂತೆ 8 ಮಂದಿ ಬಂದು ಹಲ್ಲೆಗೆ ಯತ್ನಿಸಿದ್ದಾರೆ.
ನಮ್ಮ ಬಾಸ್ ಇಲ್ಲದ ಸಮಯದಲ್ಲಿ ಆವಾಜ್ ಹಾಕ್ತೀಯ ಅಂತ ಬೆದರಿಕೆ ಹಾಕಿದ್ದಾರೆ.
8 ಮಂದಿಗೆ ಬಾಸ್ ಆಗಿದ್ದ ಕಳ್ಳಶಿವು.ಬಾಸ್ ಇಲ್ಲದಿದ್ದಾಗ ಆವಾಜ್ ಹಾಕಿದ್ದೀಯ ಎಂದು ಹೇಳಿ ದರ್ಶನ್ ಮೇಲೆ ಹಲ್ಲೆ ನಡೆಸಿದ್ದಾರೆ.ಈ ವೇಳೆ ಜೊತೆ ಇದ್ದ ದರ್ಶನ್ ಸ್ನೇಹಿತರು 8 ಮಂದಿಯ ಗುಂಪು ನೋಡಿ ಓಡಿಹೋಗಿದ್ದಾರೆ.ತಪ್ಪಿಸಿಕೊಂಡು ಹೋಗುವ ಪ್ರಯತ್ನ ನಡೆಸಿದ ದರ್ಶನ್ ನ ಹಿಡಿದು ಬೈಕ್ ನಲ್ಲಿ ಹತ್ತಿಸಿಕೊಂಡು ಮತ್ತೊಂದು ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ.ಈ ವೇಳೆ ಶರತ್ ಬಿಯರ್ ಬಾಟಲಿನಿಂದ ದರ್ಶನ್ ತಲೆಗೆ ಹೊಡೆದಿದ್ದಾನೆ.ದರ್ಶನ್ ಮೇಲೆ ನಡೆದ ಅಟ್ಯಾಕ್ ಸುದ್ದಿ ಕೇಳಿ ಸ್ನೇಹಿತರ ಗುಂಪು ಬಂದಿದೆ.ಗಾಯಗೊಂಡಿದ್ದ ದರ್ಶನ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ದರ್ಶನ್ ಮೇಲೆ ಹಲ್ಲೆ ನಡೆಸಿದ 8 ಮಂದಿ ಆರೋಪಿಗಳನ್ನ ಕೃತ್ಯ ನಡೆದ ಕೇವಲ 24 ಗಂಟೆ ಒಳಗೆ ವಿಜಯನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.