ವಿದ್ಯುತ್ ತಂತಿ ತಗುಲಿ ಜೆಸ್ಕಾಂ ಜೆಇ ದುರ್ಮರಣ

Spread the love

ಯಾದಗಿರಿ: ವಿದ್ಯುತ್ ತಂತಿ ತಗುಲಿ ಜೆಸ್ಕಾಂ ಜೆಇ ಮೃತಪಟ್ಟಿರುವ ಘಟನೆ ಯಾದಗಿರಿ ತಾಲೂಕಿನ ಬಂದಳ್ಳಿಯಲ್ಲಿ ನಡೆದಿದೆ.

ಜೆಸ್ಕಾಂ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪ್ರಶಾಂತ್ ಮೃತ ದುರ್ದೈವಿ.

ಜೆಸ್ಕಾಂ ಇಲಾಖೆಯಲ್ಲಿ ಜೆಇ ಆಗಿ ಸೇವೆ ಮಾಡುತ್ತಿದ್ದ ಪ್ರಶಾಂತ್ ಲೈನ್ ಮ್ಯಾನ್ ಬಾರದ ಕಾರಣ ತಾವೇ ಫಿಲ್ಡ್ ಗೆ ಇಳಿದಿದ್ದರು.

ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಪ್ರಶಾಂತ್ ಮೃತಪಟ್ಟಿದ್ದಾರೆ.

ಯಾದಗಿರಿ ಗ್ರಾಮೀಣ‌ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.