ಮೈಸೂರು: ಚಾಮರಾಜ ಜೋಡಿ ರಸ್ತೆಯಲ್ಲಿರುವ ಸಂಸ್ಕೃತ ಪಾಠ ಶಾಲೆಯಲ್ಲಿ
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ ಶೃಂಗೇರಿ ಶಾರದಾ ಪೀಠದ
ಪೀಠಾಧಿಪತಿ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ 33ನೇ ವರ್ಧಂತಿ ಮಹೋತ್ಸವ
ಹಮ್ಮಿಕೊಳ್ಳಲಾಯಿತು.
ವರ್ಧಂತಿ ಮಹೋತ್ಸವ ಅಂಗವಾಗಿ
ವೇದ ಮಕ್ಕಳಿಗೆ ಪುಸ್ತಕ ಪೆನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಧರ್ಮ ಮತ್ತು ಸಂಸ್ಕೃತಿ ನಾಣ್ಯದ ಎರಡು
ಮುಖಗಳಿದ್ದಂತೆ ಎಂದು ಹೇಳಿ ಅವುಗಳ ಮಹತ್ವ ತಿಳಿಸಿದರು.
ಗುರುಗಳನ್ನು, ತಂದೆ-ತಾಯಿಯನ್ನು ಪ್ರೀತಿಸಿ ಗೌರವಿಸಿ ಒಳ್ಳೆಯ ವ್ಯಕ್ತಿತ್ವ ರೂಪಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯನ್ನು
ಉಳಿಸಿ ಬೆಳೆಸುವ ಕೆಲಸವನ್ನು ನಾವೆಲ್ಲರು ಮಾಡಬೇಕಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸುಚೇಂದ್ರ,ಜತ್ತಿ ಪ್ರಸಾದ್, ಅಜಯ್ ಶಾಸ್ತ್ರಿ, ಶ್ರೀಕಾಂತ್ ಕಶ್ಯಪ್,ಪ್ರಶಾಂತ್ ಮತ್ತಿತರರು ಹಾಜರಿದ್ದರು.
