ಠಾಣೆಯಲ್ಲೇ ವಾಹನ ಕದ್ದು, ಸಿಕ್ಕಿ ಬಿದ್ದರು!

Spread the love

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಸಾಮಾನ್ಯವಾಗಿ ಕಳ್ಳರು, ಜನಸಾಮಾನ್ಯರ ಮನೆ ದೋಚೋದೇ ಹೆಚ್ಚು ಆದರೆ ಇಲ್ಲಿ ಐನಾತಿಗಳು ಪೊಲೀಸ್ ಠಾಣೆಯಲ್ಲೇ ಕಳ್ಳತನ ಮಾಡಿದ್ದು,ಅವರಿಗೆ ಪೊಲೀಸರ ಭಯವೆ ಇಲ್ಲವೇನೊ ಅನ್ನಿಸುತ್ತದೆ.

ಕಳ್ಳರು,ದರೋಡೆಕೋರರಿಗೆ ಮನೆಯಾದರೆನು ಮತ್ತೇನಾದರೂ ಏನು ಸಿಕ್ಕಿಧ್ದು ಗೋರೊದು ಅಷ್ಟೇ. ಆದರೆ ಠಾಣೆಯೊಂದರಲ್ಲಿ ಜಪ್ತಿಯಾಗಿದ್ದ ವಾಹನವನ್ನೇ ಕಳ್ಳರು ಕದ್ದು ಸಿಕ್ಕಿಬಿದ್ದಿದ್ದಾರೆ.

ಚಾಮರಾಜನಗರದ ಅರ್ಪಾಜ್,ಇರ್ಫಾನ್ ಎಂಬ ಆರೋಪಿಗಳನ್ನ ಪಟ್ಟಣ ಪೊಲೀಸ್ ಸಿಬ್ಬಂದಿಗಳ ಸಹಕಾರದಿಂದ ಸೆನ್ ಪೊಲೀಸರು ಜೈಲಿಗಟ್ಟಿದ್ದಾರೆ‌.

ಚಾಮರಾಜನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಭಾನುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆ ನುಗ್ಗಿದ ಕಳ್ಳ ಠಾಣೆಯಲ್ಲಿ ನಿಲ್ಲಿಸಿದ್ದ ಬೈಕ್ ಸಮೇತ ಪರಾರಿಯಾಗಿದ್ದ.

ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.ಈ ಬೈಕ್ ಎನ್ ಡಿ ಪಿಎಸ್ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿದ್ದ ಬೈಕ್.

ಪ್ರಕರಣ ದಾಖಲಿಸಿಕೊಂಡು ಸ್ಥಳೀಯ ಪೊಲೀಸ್ ಸಿಬ್ಬಂದಿ ಕ್ರೈಂ ವಿಭಾಗದ ಕೃಷ್ಣಮೂರ್ತಿ ಹಾಗೂ ಮೋಹನ್ ಅವರ ನೆರವಿನಿಂದ ಎಸ್ಕೇಪ್ ಆಗಿದ್ದ ಕಳ್ಳನನ್ನ ಕೆಲವೇ ಗಂಟೆಗಳಲ್ಲಿ ಹುಡುಕಿ ಬಂಧಿಸಿ ಸೆನ್ ಇನ್ಸ್ ಪೆಕ್ಟರ್ ಸಾಗರ್ ಅವರು ಜೈಲಿಗಟ್ಟಿದ್ದಾರೆ‌.