ಮೈಸೂರು: ವೇದ ಉಪನಿಷತ್ತುಗಳ ಮಹತ್ವವನ್ನು ಇಂದಿನ ಯುವಪೀಳಿಗೆ ಅರಿತು ನಡೆಯಬೇಕು ಎಂದು ಆಚಾರ್ಯ ಪಾವಗಡ ಪ್ರಕಾಶ್ ಹೇಳಿದರು.
ಮೈಸೂರಿನ ಅವಧೂತ ದತ್ತಪೀಠ,ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವೇದ ಸ್ವರೂಪದ ಪರಿಚಯದ ಕುರಿತು ಪಾವಗಡ ಪ್ರಕಾಶ್ ಆಚಾರ್ಯರು ಮೂರು ದಿನಗಳ ಪ್ರವಚನ ಮಾಲಿಕೆ ಹಮ್ಮಿಕೊಂಡಿದ್ದು,ಅದರ ಉದ್ಘಾಟನೆ ವೇಳೆ ಅವರು ಮಾತನಾಡಿದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜೀ ಹಾಗೂ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಜೀಯವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆದಿದೆ.
ಮುಂದುವರಿದು ಮಾತನಾಡಿದ ಪಾವಗಡ ಪ್ರಕಾಶ್ ಅವರು,ದೇವಾನುದೇವತೆಗಳು, ಯತಿಗಳು, ರಾಜರು, ವಿದ್ವಾಂಸರು ಕೂಡ ಧ್ಯಾನ ತಪಸ್ಸು ಮಾಡಿ ಸನ್ಮಾರ್ಗದ ಸಾಮ್ರಾಜ್ಯ ಸಂಪತ್ತು ಸ್ಥಾಪಿಸಿದ್ದರು, ಆದರೆ ಇಂದಿನ ಸಮಾಜದಲ್ಲಿ ಪೋಷಕರು, ಗುರುಹಿರಿಯರ ಮಾತುಗಳನ್ನು ಪಾಲಿಸುವ ಗೌರವಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.
ವಿದೇಶಿ ವ್ಯಾಮೋಹ ಕ್ಷಣಿಕ ಆಸೆಗಾಗಿ ಯುವಸಂಸ್ಕೃತಿ ಬಲಿಯಾಗಬಾರದು,ನಮ್ಮ ಭಾರತದ ಪರಂಪರೆಯನ್ನ ಮುಂದಿನ ಯುವಪೀಳಿಗೆಗೆ ಪರಿಚಯಿಸುವಲ್ಲಿ ಪೋಷಕರ ಮಾತ್ರ ಪ್ರಮುಖವಾದುದು ಎಂದು ಪಾವಗಡ ಪ್ರಕಾಶ್ ಸಲಹೆ ನೀಡಿದರು.
ಹೆಚ್.ವಿ ರಾಜೀವ್ ಅವರು ಮಾತನಾಡಿ, ಮೈಸೂರಿನಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಪಾವಗಡ ಪ್ರಕಾಶ್ ಅವರ ಮಾತುಗಳು ಕೇಳಲೆಂದೇ ಸಾಂಸ್ಕೃತಿಕ ಚಿಂತಕರು ಕಾತುರದಲ್ಲಿರುವುದು ಸಂತಸದ ವಿಚಾರ ಇಂತಹ ಕಾರ್ಯಕ್ರಮಗಳ ಆಯೋಜನೆ ಬಹಳ ಮುಖ್ಯ ಎಂದು ತಿಳಿಸಿದರು.
ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ನಡೆಯುತ್ತಿರುವ ಪ್ರವಚನ ಮಾಲಿಕೆ ಕಾರ್ಯಕ್ರಮದಲ್ಲಿ ವೇದ ಉಪನಿಷತ್ತು, ಭಗವದ್ಗೀತೆ, ಮಹಾಭಾರತ ಭಾಗದಲ್ಲಿ ಬರುವ ಆಯಾಮಗಳು ಇತಿಹಾಸ, ಪರಂಪರೆ, ಸಂಸ್ಕೃತಿ ಆಧ್ಯಾತ್ಮಿಕತೆಯ ಸಾರಂಶಗಳ ಬಗ್ಗೆ ಯುವಪೀಳಿಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಇಳೈ ಆಳ್ವಾರ್ ಸ್ವಾಮಿಜಿ,ಮೈಸೂರು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್,ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್,ವಿಪ್ರ ಮುಖಂಡರಾದ ನಂ ಶ್ರೀ ಕಂಠಕುಮಾರ್,ಕೆ.ಆರ್.ಸತ್ಯನಾರಯಣ,ಸಮಾಜ ಸೇವಕ ರಘುರಾಮ್ ವಾಜುಪೇಯಿ,ಉದ್ಯಮಿ ಮಹೇಶ್ ಶಣೈ,ದತ್ತ ಸೇನೆಯ ಸತ್ಯನಾರಯಣ ,ಯುವಮುಖಂಡ ವಿಕಾಸ್ ಶಾಸ್ತ್ರಿ, ಶ್ರೇಯಸ್ ಮತ್ತಿತರು ಉಪಸ್ಥಿತರಿದ್ದರು.
