ಮೈಸೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಕನ್ನಡ ಚಳವಳಿಗಳ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನಡಪರ ಸಂಘಟನೆಗಳವರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.
ಇಂದು ಮೈಸೂರಿನ ಆರ್ ಗೇಟ್ ಸರ್ಕಲ್ ಬಳಿ ಖಾಲಿ ಸಿಲಿಂಡರ್ ಇಟ್ಟು ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರ ಸಿಲಿಂಡರ್ ದರವನ್ನು ಅಗಾಧವಾಗಿ ಏರಿಸಿದೆ, ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರ ಸಹ ಹಾಲು, ವಿದ್ಯುತ್, ಮೊಸರು, ನೀರು ಮೆಟ್ರೊ ದರಗಳನ್ನು ವಿಪರೀತವಾಗಿ ಏರಿಸಿರುವುದನ್ನು ಖಂಡಿಸಲಾಯಿತು.
ಪ್ರತಿಭಟನೆಯಲ್ಲಿ ಶಿವಶಂಕರ್, ತೇಜೇಶ್ ಲೋಕೇಶ್ ಗೌಡ, ಮೂಗೂರು ನಂಜುಂಡಸ್ವಾಮಿ, ಪಾರ್ಥಸಾರಥಿ, ರಾಘವೇಂದ್ರ, ಮಧವನಚಂದ್ರು, ಕೃಷ್ಣಪ್ಪ, ತಾಯೂರು ಗಣೇಶ್, ಶಿವರಾಂ ಗೌಡ, ಹನುಮಂತಯ್ಯ, ನಾರಾಯಣ, ಗುರು, ಕುಮಾರ್, ತ್ಯಾಗರಾಜ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.