ಬೇಡಿಕೆ ಈಡೇರಿಕೆಗೆ ಚಳವಳಿ ಪ್ರಾರಂಭಿಸಿದ ವಾಟಾಳ್

Spread the love

ಮೈಸೂರು: ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಳ್ ನಾಗರಾಜ್ ಅವರು ಬೆಂಗಳೂರಿನಿಂದ ಮೈಸೂರಿನವರೆಗೂ ತೆಂಗಿನ ಕಾಯಿ ಈಡುಗಾಯಿ ಹೊಡೆಯುವ ಮೂಲಕ ವಿನೂತನ ಚಳುವಳಿಯನ್ನು ಹಮ್ಮಿಕೊಂಡಿದ್ದಾರೆ.

ಅದರ ಅಂಗವಾಗಿ ಶನಿವಾರ ಸಂಜೆ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ತೆಂಗಿನಕಾಯಿಗಳನ್ನು ಈಡುಗಾಯಿ ಹೊಡೆಯುವ ಮುಖಾಂತರ ರಾಜ್ಯ ಸರ್ಕಾರ ಕರ್ನಾಟಕದ ಕನ್ನಡಿಗರ ಸಮಗ್ರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿನೂತನ ಚಳುವಳಿಯನ್ನು ಆರಂಭಿಸಿದರು.

ಈ ಚಳವಳಿಯಲ್ಲಿ ಕನ್ನಡ ಹೋರಾಟಗಾರರಾದ ಶಿವಶಂಕರ್, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮೂಗೂರು ನಂಜುಂಡಸ್ವಾಮಿ, ಪಾರ್ಥಸಾರಥಿ, ರಾಘವೇಂದ್ರ, ಜಿಯಾ, ಮಧುವನ ಚಂದ್ರು, ನೇಹಾ, ವರಕೂಡು ಕೃಷ್ಣೆಗೌಡ, ಪ್ರಭುಶಂಕರ, ಬಸವರಾಜು, ಹನುಮಂತಯ್ಯ ರಘು ಅರಸ್, ರವೀಶ್ ಪ್ರಭಾಕರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಈ ವೇಳೆ ವಾಟಾಳ್ ಸೇರಿದಂತೆ ಎಲ್ಲರೂ ಸಮಸ್ತ ಕನ್ನಡಿಗರ‌ ಬೇಡಿಕೆ ಈಡೇರಬೇಕು,ಮಹದಾಯಿ,ಯೋಜನೆ,ಮೇಕೆದಾಟು‌ ಯೋಜನೆ,ಕಳಸಾಬಂಡೂರಿ ಯೋಜನೆ ಆಗಲೇಬೇಕು,ವಾಟಾಳ್ ನಾಗರಾಜ್ ಅವರ ಚಳವಳಿ ಯಶಸ್ವಿಯಾಗಲಿ ಎಂಬ ಘೋಷಣೆಗಳನ್ನು ಕೂಗಿದರು.