ಮೈಸೂರು: ಅರಣ್ಯ ಇಲಾಖೆಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಖಂಡಿಸಿ ನ.16 ಭಾನುವಾರ ಮೈಸೂರಿನ ಆರ್ ಗೇಟ್ ನಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪಾರ್ಥಸಾರಥಿ, ತೇಜೇಶ್ ಲೋಕೇಶ್ ಗೌಡ, ಮೂಗೂರು ನಂಜುಂಡಸ್ವಾಮಿ, ಶಿವಶಂಕರ್, ಹನುಮಂತಯ್ಯ, ಸಿಂದುವಳ್ಳಿ ಶಿವಕುಮಾರ್, ಶಿವರಾಂ , ರಾಧಾಕೃಷ್ಣ, ಪ್ರಭಾಕರ್, ಕೃಷ್ಣಪ್ಪ , ರವೀಶ್,ವಿಷ್ಣು ಮತ್ತಿತರರು ಪಾಲ್ಗೊಂಡಿದ್ದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಅವರು ಮೈಸೂರು ಜಿಲ್ಲೆಯಲ್ಲಿ ಹುಲಿ ಹಾಗೂ ಹುಲಿಮರಿಗಳ ಸಾವು ನಡೆಯುತ್ತಲೇ ಇದೆ,ಆದರೂ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಳಗಾವಿಯಲ್ಲಿ ಸುಮಾರು 20 ಜಿಂಕೆಗಳು ಮೃತಪಟ್ಟಿವೆ, ಇದಕ್ಕೆ ಯಾರು ಕಾರಣ ಜವಾಬ್ದಾರಿ ಯಾರು ಪ್ರಾಣಿಗಳನ್ನು ರಕ್ಷಣೆ ಮಾಡುವವರು ಯಾರು ಎಂದು ಅವರು ಕಾರವಾಗಿ ಪ್ರಶ್ನಿಸಿದರು.
ಇತ್ತೀಚಿಗೆ ಅರಣ್ಯದಲ್ಲಿ ಕಾರು, ಕಾರಿನೊಳಗೆ ಗನ್ ಸಿಕ್ಕಿದೆ ಹಾಗಾದರೆ ಕಾಡನ್ನು ಯಾರು ರಕ್ಷಣೆ ಮಾಡುತ್ತಿಲ್ಲವೇ ಕಾಡಿನಲ್ಲಿ ಎಷ್ಟು ಮರಗಳು ಕಳವಾಗುತ್ತಿದೆ ಇದಕ್ಕೆ ಬಂದು ಬಸ್ತ್ ಯಾಕೆ ಮಾಡುತ್ತಿಲ್ಲ ಎಂದು ವಾಟಾಳ್ ಪ್ರಶ್ನಿಸಿದರು.
ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಸಂಘರ್ಷ ನಿಲ್ಲಬೇಕು, ಕಾಡನ್ನು ರಕ್ಷಿಸುವ ಬಗ್ಗೆ ಕೂಡಲೇ ಉನ್ನತ ಮಟ್ಟದ ತನಿಖೆ ಆಗಬೇಕು, ಕಾಡಿನಿಂದ ನಾಡಿಗೆ ಪ್ರಾಣಿಗಳು ಬರದ ರೀತಿ ಬೇಲಿ ಹಾಕಬೇಕು ಎಂದು ವಾಟಳ್ ನಾಗರಾಜ್ ಸರ್ಕಾರವನ್ನು ಆಗ್ರಹಿಸಿದರು.
