ಮೈಸೂರು, ಜೂ.2: ಮೈಸೂರಿನ ಆರ್ ಗೇಟ್ ಸರ್ಕಲ್ ಬಳಿ ಕನ್ನಡ ಚಳವಳಿಗಳ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕಮಲ್ ಹಸನ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ವಾಟಾಳ್, ಈ ಕೂಡಲೇ ತಮಿಳು ನಟ ಹಾಸನ್ ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಕಮಲ್ ಹಸನ್ ಮೇಲೆ ಕೇಸು ದಾಖಲಿಸಿ ಅವರನ್ನು ತಮಿಳುನಾಡಿನಿಂದ ಕರೆತಂದು ಕರ್ನಾಟಕದ ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದರು.
ಕಮಲ್ ರ ಸಿನಿಮಾವನ್ನ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಲು ಸರ್ಕಾರ ಅವಕಾಶ ನೀಡಬಾರದು ಎಂದು ವಾಟಾಳ್ ನಾಗರಸಜ್ ಎಚ್ವರಿಸಿದರು.

ಪ್ರತಿಭಟನೆಯಲ್ಲಿ ಪಾರ್ಥಸಾರಥಿ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಶಿವಶಂಕರ್, ತಾಯೂರು ಗಣೇಶ್, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ವರಕೂಡು ಕೃಷ್ಣೇಗೌಡ, ಚಂದ್ರು , ಪ್ರಭುಶಂಕರ, ಮಧುವನ ಚಂದ್ರು, ಹನುಮಂತಯ್ಯ, ಪ್ರಭಾಕರ್, ರಾಜೂಗೌಡ, ಭಾಗ್ಯಮ್ಮ, ರಘು ಅರಸ್, ಗಣೇಶ್ ಪ್ರಸಾದ್, ಗುರು ಮಲ್ಲಪ್ಪ , ಸುಬ್ಬೇಗೌಡ, ಕೃಷ್ಣಪ್ಪ , ರವೀಶ್, ನೇಹಾ , ವಿಷ್ಣು ಮತ್ತಿತರರು ಪಾಲ್ಗೊಂಡಿದ್ದರು.